ಸೇತುವೆಯಿಂದ ಧುಮುಕಿದವನ ಶವ ಪತ್ತೆ

Posted on May 12, 2011

0


ಕುಂದಾಪುರ: ಮೊನ್ನೆ ಸಂಜೆ ೭ರ ಸುಮಾರಿಗೆ ಕುಂದಾಪುರ ಪ್ರಥಮ ಸೇತುವೆ ಮೇಲಿನಿಂದ ಅಪರಿಚಿತ ಯುವಕನೋರ್ವ ನದಿಗೆ ಹಾರಿದ ಅಸ್ಪಷ್ಟ ಸುದ್ದಿಯ ಬೆನ್ನಿಗೆ ನಿನ್ನೆ ಪಂಚಗಂಗಾ ಬಳಿ ಹೊಳೆಯ ಬಬ್ಬು ಕುದ್ರುವಿನಲ್ಲಿ ಅಪರಿಚಿತ ಗಂಡಸೋರ್ವನ ಶವ ಪತ್ತೆಯಾಗಿದೆ.

ಮೊನ್ನೆ ಸಂಜೆ ಸೇತುವೆ ಪರಿಸರದಲ್ಲಿ ನದಿಗೆ ಹಾರಿದ ಯುವಕನೋರ್ವನ ಬಗ್ಗೆ ಏಕಾಏಕಿ ಸುದ್ದಿ ಹಬ್ಬಿತ್ತು. ಇದನ್ನು ಗಮನಿಸಿ ದವರ ಪ್ರಕಾರ ಹರೆಯದ ಹುಡುಗನೋರ್ವ ಸೇತುವೆ ಐದನೇ ಸ್ತಂಭದ ಮೇಲಿನಿಂದ ಹೊಳೆಗೆ ಹಾರಿದ ಎನ್ನಲಾಗುತ್ತಿದೆ. ಮೊನ್ನೆ ಪಿಯುಸಿ ಫಲಿತಾಂಶವಿದ್ದರಿಂದ ಫೇಲಾದ ವಿದ್ಯಾರ್ಥಿಯೋರ್ವನು ಹೊಳೆಗೆ ಹಾರಿ ಆತ್ಮಹತ್ಯೆಗೈದಿದ್ದಾನೆಂಬ ಪುಕಾರು ಹಬ್ಬಿತ್ತಾ ದರೂ ಅದು ಹೆಚ್ಚಿನ ತೀಕ್ಷ್ಣತೆಯನ್ನು ಪಡೆದು ಕೊಂಡಿರಲಿಲ್ಲ. ಆದರೆ ಮರುದಿನ ಚಿಪ್ಪು ಸಂಗ್ರಹಕ್ಕೆ ಬಬ್ಬುಕುದ್ರುವಿನ ಬಳಿ ಕಾರ್ಮಿಕ ರಿಗೆ ಕುದ್ರುವಿನ ದಡದಲ್ಲಿ ಸಿಲುಕಿಬಿದ್ದ ಅಪರಿಚಿತ ಶವ ಕಾಣಿಸಿ ಕುಂದಾಪುರ

ಠಾಣೆಗೆ ಮಾಹಿತಿ ರವಾನಿಸಲಾಗಿತ್ತು. ಆದರೂ ಶವದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಅಪರಿಚಿತ ಶವ ಮೊನ್ನೆ ಸೇತುವೆಯಿಂದ ಹಾರಿದ ಯುವಕನದ್ದೇ ಆಗಿರ

ಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

Posted in: Special Report