ಶ್ರೀಲಂಕಾ ಪ್ರೀಮಿಯರ್ ಲೀಗ್ಗೆ ಅಫ್ರಿದಿ

Posted on May 12, 2011

0


ಕರಾಚಿ: ಪಾಕಿಸ್ತಾನದ ಅಗ್ರ ಕ್ರಿಕೆಟಿಗರು ಶ್ರೀಲಂಕಾ ಪ್ರೀಮಿಯರ್ ಲೀಗ್(ಎಸ್‌ಎಲ್‌ಪಿ)ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನದ ಶಹೀದ್ ಅಫ್ರಿದಿ ಪ್ರಮುಖರಾಗಿದ್ದಾರೆ. ಅಫ್ರಿದಿ ಲೀಗ್‌ನಲ್ಲಿ ತಂಡವೊಂದನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಲಂಕಾದಲ್ಲಿ ಒಂದು ತಂಡ ವನ್ನು ಮುನ್ನಡೆಸಲು ನಾನು ತಯಾ ರಾಗಿದ್ದೇನೆ. ಇದು ಒಳ್ಳೆಯ ಅವಕಾಶ ಮತ್ತು ಇದನ್ನು ಸದುಪಯೋಗ ಪಡಿಸಿ ಕೊಳ್ಳಲಿದ್ದೇನೆ ಎಂದು ಅಫ್ರಿದಿ ತಿಳಿಸಿ ದ್ದಾರೆ.

ಬಾಂಗ್ಲಾದೇಶದಲ್ಲಿ ನಡೆಯಲಿರುವ ಪ್ರಿಮಿಯರ್ ಲೀಗ್‌ನಲ್ಲಿ ಕೂಡ ತಂಡವೊಂದರ ನಾಯಕತ್ವ ವಹಿಸಿಕೊಳ್ಳಲು ಪ್ರಸ್ತಾಪ ಬಂದಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ನೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದೇನೆ ಮತ್ತು ೩೫ ಸಾವಿರ ಡಾಲರ್‌ಗೆ ಒಪ್ಪಂದ ನಡೆದಿದೆ ಎಂದರು.

Posted in: Sports News