ರಾಜ್ಯಪಾಲರು ಪದೇ ಪದೇ ದೆಹಲಿಗೆ ಯಾಕೆ ಹೋಗುತ್ತಾ ರೆಂದು ತಿಳಿದಿಲ್ಲ: ಯಡಿಯೂರಪ್ಪ

Posted on May 12, 2011

0


ಬೆಂಗಳೂರು: ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ ಎಂಬುದೇ ತಮಗೆ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು ಈ ಶಂಕೆ ವ್ಯಕ್ತಪಡಿಸಿದ ಅವರು ಇದನ್ನು ಪ್ರಶ್ನಿಸುವುದಿಲ್ಲ. ಸಂವಿಧಾನದ ಮುಖ್ಯಸ್ಥರಾದ ಅವರು ಎಲ್ಲಿಗೆ ಬೇಕಾ ದರೂ ಹೋಗಬಹುದು, ಪ್ರಧಾನ ಮಂತ್ರಿಗಳಿಂದ ಹಿಡಿದು ರಾಷ್ಟ್ರಪತಿ ಗಳವರೆಗೆ ಯಾರೆಂದರೆ ಅವರನ್ನು ಭೇಟಿ ಮಾಡಬಹುದು. ಅದರ ಬಗ್ಗೆ ಪ್ರಶ್ನಿಸಲೂ ಆಗುವುದಿಲ್ಲ. ಮಾಜೀ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ಆರಂಭಿಸುತ್ತಾರಂತೆ. ಅವರಿಗೆ ಈಗಲಾದರೂ ಜನ ಬೆಂಬಲ ಸಿಗಲಿ ಎಂದು ವ್ಯಂಗ್ಯವಾಡಿದರು. ಪ್ರತಿಪಕ್ಷಗಳ ಕೆಲಸವೇ ಸರ್ಕಾರದ ವಿರುದ್ಧ ಹೋರಾ ಡುವುದು, ಹೀಗಾಗಿ ಅವರು ಅವರ ಕೆಲಸ ಮಾಡಲಿ, ನಾವು ಸರ್ಕಾರವಾಗಿ ನಮ್ಮ ಕೆಲಸ ಮಾಡು ತ್ತೇವೆ ಎಂದೂ ಅವರು ನುಡಿದರು.

Posted in: State News