ಮದುವೆಯಾಗುವುದಾಗಿ ವಂಚಿಸಿ ಪರಾರಿಯಾದ ಯುವಕ!

Posted on May 12, 2011

0


ಮಂಗಳೂರು: ಮದುವೆಯಾಗುವುದಾಗಿ ಪೊಲೀಸರ ಸಮ್ಮುಖದಲ್ಲಿ ಮಾತುಕೊಟ್ಟು ಆನಂತರ ಮದುವೆಯನ್ನು ರಾಕರಿಸಿ ಯುವಕನೊಬ್ಬ ಪರಾರಿಯಾದ ಘಟನೆ ನಡೆದಿದೆ.

ಮುಲ್ಕಿ ಠಾಣಾ ವ್ಯಾಪ್ತಿಯ ಇಂದಿರಾನಗರ ಎಂಬಲ್ಲಿಯ ದಿವಾಕರ ಎನ್ನುವ ಯುವಕಗೂ ಪೆರ್ಮುದೆಯ ಯುವತಿಗೂ ಗೆಳೆತನ ಇತ್ತು. ಪೆರ್ಮುದೆಯ ಯುವತಿಯ ಮನೆಯ ಪಕ್ಕದ ಮದುವೆ ಕಾರ‍್ಯಕ್ರಮಕ್ಕೆಂದು ಬಂದಿದ್ದ ದಿವಾಕರ ತನ್ನ ಗೆಳತಿಯ ಜೊತೆ ಸಲಿಗೆಯಿಂದ ವರ್ತಿಸಿದ್ದ. ಈ ನಡುವೆ ಮದರಂಗಿ ಕಾರ‍್ಯಕ್ರಮ ಮುಗಿದ ನಂತರವೂ ಯುವತಿ ತನ್ನ ಮನೆಗೆ ಬಂದಿರಲಿಲ್ಲ.

ಇದನ್ನು ಗಮಸಿದ ಯುವತಿ ಮನೆಯವರು ಅತ್ತ-ಇತ್ತ ಹುಡುಕಾಡಿದಾಗ ದಿವಾಕರನೂ ನಾಪತ್ತೆಯಾಗಿರುವುದಾಗಿ ಗಮನಕ್ಕೆ ಬಂತು. ಸಾಕಷ್ಟು ಹುಡುಕಾಡಿದ ಬಳಿಕ ಜೋಡಿ ಅಲ್ಲೇ ಪಕ್ಕದ ಗುಡ್ಡೆಯಲ್ಲಿ ಸರಸ-ಸಲ್ಲಾಪದಲ್ಲಿ ತೊಡಗಿತ್ತು. ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಯುವಕನನ್ನು ಯುವತಿ ಕಡೆಯವರು ತಮ್ಮ ಹುಡುಗಿಯನ್ನು ಮದುವೆಯಾಗಬೇಕು ಎಂದು ಪಟ್ಟು ಹಿಡಿದರು.

ಪ್ರಕರಣ ಗಂಭೀರವಾದಾಗ ಮರುದಿನ ಪೊಲೀಸ್ ಠಾಣೆಯಲ್ಲಿ ಇದನ್ನು ಇತ್ಯರ್ಥ ಮಾಡುವುದಾಗಿ ರ್ಧರಿಸಲಾಯಿತು. ಪೊಲೀಸ್ ಠಾಣೆಯಲ್ಲಿ ದಿವಾಕರ ರಾತ್ರಿ ಹೊತ್ತು ಯುವತಿಯೊಂದಿಗೆ ಸರಸ ಮಾಡಿದ ತಪ್ಪಿಗೆ ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಪೊಲೀಸರು-ಹಿರಿಯರ ಸಮ್ಮುಖದಲ್ಲಿ ಮಾತು ಕೊಟ್ಟಿದ್ದ. ನ್ನೆ ಕಟೀಲು ದೇವಾಲಯದಲ್ಲಿ ಮದುವೆಯಾಗುವುದು ಎಂದು ಶ್ಚಯಿಸಲಾಗಿತ್ತು. ಮೂರನೇ ಪುಟಕ್ಕೆ

Posted in: Local News