ಪಡುಬಿದ್ರಿ ದೇಗುಲದ ಹೋರಿ ನಾಪತ್ತೆ

Posted on May 12, 2011

0


ಮಂಗಳೂರು: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಭಕ್ತರೋರ್ವರು ನೀಡಿದ್ದ, ಶಿವನ ಸಂಗಾತಿಯನ್ನೆಲಾದ ಹೋರಿಯೊಂದು ನಾಪತ್ತೆಯಾಗಿದೆ ಎನ್ನಲಾಗಿದೆ.

ಅವ್ಯವಸ್ಥೆಯ ಆಗರವೆನ್ನಲಾಗಿರುವ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಈ ದೇವಾಲಯ ಕಳೆದ ಕೆಲವು ವರ್ಷಗಳಿಂದ ಗ್ರಾಮಸ್ಥರ ಆಡಳಿತ ಸಮಿತಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ ಎನ್ನಲಾಗಿದ್ದು, ಎರಡೆರಡು ದೇಗುಲಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮುಜುರಾಯಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿಯೋರ್ವರ ಅಧಿಕಾರ ವ್ಯಾಪ್ತಿಯಲ್ಲಿದೆ ಎನ್ನಲಾಗಿದೆ.

ದೇವಾಲಯದ ಹೋರಿಯನ್ನು ನಿರ್ವಹಿಸಲಾಗದೆ ಉಡುಪಿಯ ಗೋಶಾಲೆಯೊಂದಕ್ಕೆ ನೀಡಲಾಗಿದೆ ಎಂದು ಒಂದು ಮೂಲ ತಿಳಿಸಿದರೆ, ಹೋರಿ ತಪ್ಪಿಸಿಕೊಂಡಿದೆ ಅಥವಾ ದಲ್ಲಾಳಿಗಳ ಮೂಲಕ ಕಸಾಯಿಖಾನೆ ಸೇರಿದೆ ಎಂದು ಇನ್ನೊಂದು ಮೂಲಗಳು ತಿಳಿಸಿವೆ. ಈ ನಡುವೆ ಹೋರಿ ಸಾಕಲೆಂದು ನಿಯುಕ್ತರಾಗಿದ್ದ ‘ಬೋರಿ ಭಟ್ಟ’ ಎಂಬವರಿಗೆ ಉದ್ಯೋಗವೂ ಇಲ್ಲದಂತಾಗಿದೆ. ಶಿವನ ದೇಗುಲಕ್ಕೆ ಹೋರಿ ಅನಿವಾರ್ಯ ಮತ್ತು ಶುಭ ಸಂಕೇತವೆಂಬುದು ಭಕ್ತಜನರ ಅಭಿಪ್ರಾಯವಾಗಿದೆ.

Posted in: Local News