ಉಡುಪಿ: ಉದ್ಯೋಗ ಕೊಡಿಸುವುದಾಗಿ ವಂಚನೆ

Posted on May 12, 2011

0


ಉಡುಪಿ: ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಶಿವಮೊಗ್ಗದ ಸತೀಶ್ ಶೆಟ್ಟಿ ಎಂಬಾತ ಬ್ರಹ್ಮಾವರ ಹಣೇಹಳ್ಳಿ ಕೆಳಬೆಟ್ಟುವಿನ ಜಯರಾಂ ಶೆಟ್ಟಿ ಎಂಬವರಿಂದ ಮೂರು ಲಕ್ಷ ರೂ. ಪಡೆದು ವಂಚನೆ ಮಾಡಿರು ವುದಾಗಿ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ. ತನಗೆ ರಾಜಕೀಯ ವ್ಯಕ್ತಿಗಳ ಪರಿಚಯ ವಿರುವುದಾಗಿ ತಿಳಿಸಿ ಜಯರಾಂ ಇವರಿಂದ ಮೂರು ಲಕ್ಷ ರೂ. ಹಣ ಮಾತ್ರವಲ್ಲದೆ ಮೊಬೈಲ್, ಎಟಿಎಂ ಕಾರ್ಡು, ಸಿಮ್ ಕಾರ್ಡನ್ನು ಪಡೆದು ಉದ್ಯೋಗವನ್ನು ದೊರಕಿಸಿಕೊಡದೆ ವಂಚಿಸಿದ್ದಾನೆ. ಪೊಲೀಸರು ಆರೋಪಿಗಾಗಿ ಶೋಧ ಕಾರ‍್ಯ ಮುಂದುವರಿಸಿದ್ದಾರೆ.

ಮೋರಿಗೆ ಡಿಕ್ಕಿಯಾದ ಬೈಕ್: ಸವಾರ ಮೃತ್ಯು

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೪೮ರ ನೀರಾಕಟ್ಟೆ ಎಂಬಲ್ಲಿ ಬೈಕೊಂದು ಕಿರುಸೇತುವೆ (ಮೋರಿ)ಗೆ ಡಿಕ್ಕಿ ಹೊಡೆದು ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಇಂದು ಮುಂಜಾನೆ ಮೂರರ ಸುಮಾರಿಗೆ ನಡೆದಿದೆ.

ಚಿಕ್ಕಮಗಳೂರು ರಿಜಿಸ್ಟ್ರೇಶನ್ ಹೊಂದಿರುವ ಬೈಕ್ ರಾಷ್ಟ್ರೀಯ ಹೆದ್ದಾರಿಯ ತಿರುವೊಂದರಲ್ಲಿ ಮೋರಿಗೆ ಡಿಕ್ಕಿ ಹೊಡೆದಿದ್ದು, ಸವಾರನ ಮೃತದೇಹ ಮೋರಿ ಕೆಳಗಡೆ ಬಿದ್ದುಕೊಂಡಿತ್ತು. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹದ ಗುರುತು ಪತ್ತೆಯಾಗಿಲ್ಲ.

Posted in: State News