ಸುಳ್ಯ: ಮದುವೆಗೆ ಒಪ್ಪದ ಯುವತಿಗೆ ಇರಿತ

Posted on May 12, 2011

0


ಮಂಗಳೂರು: ಸಂಬಂಧಿ ಯುವತಿಯನ್ನು ಮದುವೆಯಾಗುವಂತೆ ಒತ್ತಾಯಿಸಿ ಆಕೆ ಒಪ್ಪದೇ ಇದ್ದ ವೇಳೆ ಹತಾಶನಾದ ಯುವಕ ಆಕೆಗೆ ಚೂರಿಯಿಂದ ಇರಿದ ಘಟನೆ ಸುಳ್ಯ ಸಮೀಪದ ಅಲೆಟ್ಟಿ ಎಂಬಲ್ಲಿ ನಿನ್ನೆ ನಡೆದಿದೆ.

ಅಲೆಟ್ಟಿ ಗ್ರಾಮದ ಹೊನ್ನಾಡಿ ಮನೆ ನಿವಾಸಿ ನಾರಾಯಣ ನಾಯ್ಕ ಎಂಬವರ ಪುತ್ರಿ ಸೌಮ್ಯಾಳನ್ನು ಆಕೆಯ ಸಂಬಂಧಿ ಕಲ್ಲಪಳ್ಳಿ ನಿವಾಸಿ ಹರೀಶ ಎಂಬಾತ ಏಕಮುಖವಾಗಿ ಪ್ರೀತಿಸುತ್ತಿದ್ದ. ಪದೇ ಪದೇ ಆಕೆಯ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ ಮಾತ್ರವಲ್ಲದೆ, ಆಕೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದನೆನ್ನಲಾಗಿದೆ. ನಿನ್ನೆಯೂ ಇದೇ ರೀತಿ ಆರೋಪಿ ಹರೀಶನು ಸೌಮ್ಯಳನ್ನು ದಾರಿ ಮಧ್ಯೆ ತಡೆದು ಮದುವೆ ಯಾಗುವಂತೆ ಪೀಡಿಸಿದ್ದು, ಈ ವೇಳೆ ಸೌಮ್ಯಾ ‘ಒಲ್ಲೆ ಎಂದು ಹೇಳಿದ್ದರಿಂದ ಕುಪಿತನಾದ ಆರೋಪಿ ಆಕೆಗೆ ಚೂರಿಯಿಂದ ಇರಿದು ಬೆದರಿಕೆ ಒಡ್ಡಿ ಸ್ಥಳ ದಿಂದ ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ತಿಳಿಸಿ ದ್ದಾರೆ. ಸೌಮ್ಯಾಳನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

Advertisements
Posted in: Local News