ಸುರತ್ಕಲ್: ಟಿಪ್ಪರ್ನಡಿಗೆ ಸಿಲುಕಿ ಬಾಲಕ ಮೃತ್ಯ ು

Posted on May 12, 2011

0


ಮಂಗಳೂರು: ಸುರತ್ಕಲ್ ಸಮೀಪದ ಕೃಷ್ಣಾಪುರ ಏಳನೇ ಬ್ಲಾಕ್‌ನ ಜನವಸತಿ ಪ್ರದೇಶದ ರಸ್ತೆಯಲ್ಲಿ ಬುಧ ವಾರ ಸಂಜೆ ಮಣ್ಣು ತುಂಬಿಕೊಂಡು ಅತಿವೇಗ ಹಾಗೂ ಅಜಾಗರೂಕತೆ ಯಿಂದ ಸಂಚರಿಸುತ್ತಿದ್ದ ಟಿಪ್ಪರ್ ಅಡಿಗೆ ಬಾಲಕ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತ ಬಾಲಕನನ್ನು ಕೃಷ್ಣಾಪುರ ನಿವಾಸಿ ಶಬ್ಬೀರ್ (೧೧) ಎಂದು ಗುರುತಿಸಲಾಗಿದೆ. ಈತ ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿ ಬಶೀರ್ ಎಂಬವರ ಪುತ್ರನಾಗಿದ್ದು, ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಶಾಲೆಗೆ ರಜಾದಿನವಾದ್ದರಿಂದ ಸಂಜೆ ವೇಳೆ ಸ್ನೇಹಿತರ ಜೊತೆ ಮನೆಯಿಂದ ಆಟವಾಡುವುದಕ್ಕೆ ತೆರಳಿದ್ದ ಸಂದರ್ಭ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತ ನಡೆಸಿದ ಟಿಪ್ಪರ್ ಚಾಲಕ ತನ್ನ ಸಹ ಚಾಲಕನೊಂದಿಗೆ ಸ್ಥಳದಿಂದ ಕಾಲ್ಕಿತ್ತು ಸುರತ್ಕಲ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ .

ಸ್ಥಳೀಯರ ಆಕ್ರೋಶ:

ಟಿಪ್ಪರ್ ಅವಾಂತರಕ್ಕೆ ಬಾಲಕ ಬಲಿಯಾದ ಸುದ್ಧಿ ತಿಳಿದು ಸ್ಥಳೀಯ ಜನತೆ ಸ್ಥಳದಲ್ಲಿ ಜಮಾಯಿಸಿ ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಎರಡು ಟಿಪ್ಪರ್ ಗಳಿಗೆ ಕಲ್ಲು ಹೊಡೆದು ಹಾನಿಗೊಳಿಸಿ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ವಿಷಯ ಗಂಭೀರವಾಗುವುದನ್ನರಿತ ಸುರತ್ಕಲ್ ಪೊಲೀಸರು ಸ್ಥಳಕ್ಕಾಗಮಿಸಿ ಸೂಕ್ತ ಬಂದೋಬಸ್ತ್ ನಡೆಸಿ ಪರಿಸ್ಥಿತಿಯನ್ನು ಯಂತ್ರಣಕ್ಕೆ ತಂದಿದ್ದಾರೆ.

Advertisements
Posted in: Local News