ಸಾರ್ವಜನಿಕ ರಸ್ತೆ ಅಗೆದು ಎಸ್ಇಝೆಡ್ ತ್ಯಾಜ್ಯ ವ ಿಸರ್ಜನೆ ಪೈಪ್ಲೈನ್ ಅಳವಡಿಕೆ

Posted on May 12, 2011

0


ಸುರತ್ಕಲ್: ಎಂಎಂಸ್‌ಈಝೆಡ್ ವಿಸ್ತರಣಾ ಘಟಕ ಪೆರ್ಮುದೆಯಿಂದ ಚಂದ್ರಹಾಸನಗರ-ಕುತ್ತೆತ್ತೂರು – ಅತ್ರುಕೋಡಿ-ಕಾಟಿಪಳ್ಳವನ್ನು ಸೇರುವ ರಸ್ತೆಯ ಮೂಲಕ ಪೈಪ್‌ಲೈನ್ ಹಾಕುವ ಕಾಮಗಾರಿಯನ್ನು ಸಾರ್ವಜನಿಕರಿಗೆ, ಪಂಚಾಯತ್ ಮತ್ತು ಜಿ. ಪಂ.ಗೆ ಯಾವುದೇ ಮಾಹಿತಿ, ಸೂಚನೆ ನೀಡದೆ ನಡೆಸುವುದನ್ನು ಕುತ್ತೆತ್ತೂರು ಗ್ರಾಮಸ್ಥರು ವಿರೋಧಿಸಿದ್ದಾರೆ.

ನಿನ್ನೆ ಅತ್ರುಕೋಡಿ ಬಳಿಯಲ್ಲಿ ಈ ಬಗ್ಗೆ ಕಾಮಗಾರಿ ಆರಂಭಿಸಲು ರಸ್ತೆಯನ್ನು ಅಗೆಯಲಾಗಿತ್ತು. ಇದರ ಮಾಹಿತಿ ತಿಳಿದ ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಕಾಮಗಾರಿಯನ್ನು ತಡೆಹಿಡಿದು ವಿಚಾರಿಸಿ ದರು.

ಅತ್ರುಕೋಡಿ-ಕಾಟಿಪಳ್ಳ ರಸ್ತೆಯನ್ನು ನಿರ್ಮಾಣ ಮಾಡಲು ಖಾಸಗಿ ವ್ಯಕ್ತಿಗಳು ತಮ್ಮ ಸ್ವಂತ ಜಮೀನನ್ನು ಬಿಟ್ಟುಕೊಟ್ಟಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಈ ರಸ್ತೆಯನ್ನು ನಿರ್ಮಾಣ ಮಾಡಿ ಜಿ. ಪಂ.ಗೆ ಹಸ್ತಾಂತರಿಸಲಾಗಿತ್ತು. ಈಗ ಏಕಾಏಕಿ ಯಾರಿಗೂ ಯಾವುದೇ ಸೂಚನೆ ನೀಡದೆ ರಸ್ತೆಯನ್ನು ಅಗೆದು ಅದರ ಮಧ್ಯದಲ್ಲಿ ಎರಡು ಪೈಪ್ ಲೈನ್‌ಗಳನ್ನು ಅಳವಡಿ ಸುವುದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಮಾತ್ರವಲ್ಲದೆ ಎಂಎಸ್ ಇಝೆಡ್‌ಗೆ ಈ ರೀತಿ ಸ್ವೇಚ್ಛಾಚಾರದಿಂದ ವರ್ತಿಸಲು ಯಾವ ಹಕ್ಕು ಇದೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಪೆರ್ಮುದೆ ಗ್ರಾ. ಪಂ.ನ ಸದಸ್ಯರೂ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು ಪೈಪ್‌ಲೈನ್ ಅಳವಡಿಕೆಯ ಕ್ರಮವನ್ನು ಪ್ರತಿಭಟಿ ಸಿದ್ದಾರೆ. ಮೂರನೇ ಪುಟಕ್ಕೆ

Advertisements
Posted in: Local News