ಶರಪೋವಾಗೆ ಸುಲಭ ಗೆಲುವು

Posted on May 12, 2011

0


ರೋಮ್: ಮಾಜಿ ವಿಂಬಲ್ಡನ್ ಚಾಂಪಿಯನ್ ಮರಿಯಾ ಶರಪೋವಾ ರೋಮ್ ಅಂತಾರಾಷ್ಟ್ರೀಯ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಎಕ್ತಾರಿನಾ ಮಕರೊವಾ ವಿರುದ್ಧ ನೇರ ಸೆಟ್‌ನಿಂದ ಗೆಲುವು ದಾಖಲಿಸಿಕೊಂಡಿದ್ದು, ಪುರುಷರ ವಿಭಾಗದಲ್ಲಿ ಆಂಡಿ ಮುರ್ರೆ ಬೆಲ್ಜಿಯಂನ ಕ್ಸೇವಿಯರ್ ಮಲಿಸ್ಸೆ ವಿರುದ್ಧ ಕಠಿಣ ಗೆಲುವನ್ನು ಪಡೆದರು.

ಶರಪೋವಾ ಆಕರ್ಷಕವಾಗಿ ಆಡಿ ತನಗೆ ಸಿಕ್ಕಿದ ಎಲ್ಲಾ ಬ್ರೇಕ್ ಪಾಯಿಂಟ್‌ಗಳನ್ನು ಪಡೆದುಕೊಂಡರು. ಕೆಲವು ಪಾಯಿಂಟ್ ವೇಳೆ ಸ್ವಲ್ಪ ನರ್ವಸ್ ಆದರೂ ಶರಪೋವಾ ಗೆಲುವು ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಪುರುಷರ ವಿಭಾಗದಲ್ಲಿ ಮುರ್ರೆ ಕಠಿಣ ಪರಿಶ್ರಮದಿಂದ ಪಂದ್ಯವನ್ನು ತನ್ನ ವಶ ಮಾಡಿಕೊಂಡರು. ಅಂತಿಮ ಸೆಟ್‌ನಲ್ಲಿ ಮಲಿಸ್ಸೆ ೪-೧ರ ಮುನ್ನಡೆಯಲ್ಲಿದ್ದರು. ಆದರೆ ಇದರ ಬಳಿಕ ತನ್ನ ಆಟವನ್ನು ಉತ್ತಮಪಡಿಸಿಕೊಂಡ ಮುರ್ರೆ ಅಂತಿಮ ಸೆಟ್‌ನ್ನು ಕೂಡ ವಶಪಡಿಸಿಕೊಂಡು ಪ್ರಯಾಸದ ಗೆಲುವು ದಾಖಲಿಸಿಕೊಂಡರು.

Advertisements
Posted in: Sports News