ರಾಮಕೃಷ್ಣ ಕೊಲೆ: ಆರೋಪಿ ಆತ್ಮಹತ್ಯೆ ಯತ್ನ

Posted on May 12, 2011

0


ಪುತ್ತೂರು: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿ ಕಾರಿ ಪ್ರೊ. ರಾಮಕೃಷ್ಣ ಅವರ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮನೋಜ್ ಎಂಬಾತ ಪುತ್ತೂರು ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಮನೋಜ್‌ನನ್ನು ವಶಕ್ಕೆ ತೆಗೆದು ಕೊಂಡ ಪೊಲೀಸರು ಠಾಣೆಯಲ್ಲಿ ವಿಚಾರಣೆ ನಡೆಸಿದ್ದರು. ರಾತ್ರಿ ವೇಳೆ ಸೆಲ್‌ನ ಬಾಗಿಲಿನ ಹಿಡಿಗೆ ತನ್ನ ಕೈ ಮತ್ತು ತಲೆಯನ್ನು ಬಡಿದುಕೊಂಡು ಆತ ಆತ್ಮಹತ್ಯೆ ಯತ್ನಿಸಿದ್ದ. ಪೊಲೀಸರು ಆರೋಪಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisements
Posted in: Local News