ಯಡ್ಡಿ ಭ್ರಷ್ಟಾಚಾರದ ಪಟ್ಟಿ ಕೇಂದ್ರಕ್ಕೆ ಸಲ್ಲ ಿಸಿದ ರಾಜ್ಯಪಾಲ

Posted on May 12, 2011

0


ಬೆಂಗಳೂರು: ಸರಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಗರಣಗಳ ಕೈಪಿಡಿಯನ್ನು ರಾಜ್ಯಪಾಲ ಹಂಸರಾಜ ಭಾರದ್ವಾಜ್ ದಾಖಲೆಗಳ ಸಮೇತ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳಿರುವ ರಾಜ್ಯಪಾಲರು ಕೆಲವು ಕೇಂದ್ರ ಸಚಿವರು ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಲ್ಲದೇ ಈ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಕಳೆದ ೯ರಂದು ಪ್ರದೇಶ ಕಾಂಗ್ರೆಸ್ ನಿಯೋಗ ಭ್ರಷ್ಟಾಚಾರ ಹಗರಣಗಳಿಗೆ ಸಂಬಂಧಿಸಿದಂತೆ ದೂರು ನೀಡಿದಲ್ಲದೇ ಯಡಿಯೂರಪ್ಪ ಸರಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರನ್ನು ಒತ್ತಾಯ ಮಾಡಿದ್ದವು. ಒತ್ತಾಯದ ಜತೆಗೆ ಮನವಿ ಪತ್ರವನ್ನೂ ಸಲ್ಲಿಸಿದ್ದರು.

ತಾವು ಸಂಗ್ರಹಿಸಿದ ದಾಖಲೆ ಮತ್ತು ಕಾಂಗ್ರೆಸ್ ಪಕ್ಷ ಡಿದ ದಾಖಲೆಗಳನ್ನು ಕ್ರೋಡೀಕರಿಸಿ ಕೇಂದ್ರಕ್ಕೆ ನೀಡಿದ್ದಾರೆ. ಈ ಸಂಬಂಧ ಕೇಂದ್ರ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಿ ಎಂದು ತಮ್ಮ ಅಂಗಳದಲ್ಲಿನ ಚೆಂಡನ್ನು ಕೇಂದ್ರಕ್ಕೆ ಒತ್ತು ಹಾಕಿದ್ದಾರೆ. ರಾಜ್ಯಪಾಲರ ನಿಲುವಿನ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಪದೇ ಪದೇ ದೆಹಲಿ ಭೇಟಿಯನ್ನು ಪ್ರಶ್ನಿಸಿದ್ದಾರೆ. ಸಂವಿಧಾನದಲ್ಲಿ ರಾಜ್ಯಪಾಲರಿಗೆ ಎಲ್ಲಾ ರೀತಿಯ ಅಧಿಕಾರ ಇದೆ. ಅವರು ಎಷ್ಟು ಬಾರಿಯಾದರೂ ದೆಹಲಿಗೆ ಹೋಗಿ ಬರಬಹುದು. ಅದನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

Advertisements
Posted in: State News