ಮಹಿಳೆ ನೇಣಿಗೆ ಶರಣು

Posted on May 12, 2011

0


ಮಂಗಳೂರು: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಪುಂಜಾಲಕಟ್ಟೆ ನಿವಾಸಿ ಮಹಿಳೆಯ ಶವ ಮನೆ ಸಮೀಪದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ರಾಯಿ-ಹೋರಂಗಳ ನಿವಾಸಿ ಸಂಜೀವ ಅವರ ಪತ್ನಿ ರತ್ನಾ(೩೨) ಆತ್ಮಹತ್ಯೆ ಮಾಡಿಕೊಂಡವರು. ಇವರು ಪತಿಯೊಂದಿಗೆ ವೈಮನಸ್ಸಿನಿಂದ ಮೇ ಎರಡರಂದು ಮನೆ ಬಿಟ್ಟು ನಾಪತ್ತೆಯಾಗಿದ್ದರು. ನಿನ್ನೆ ಅವರ ಪುತ್ರ ಗುಡ್ಡಕ್ಕೆ ತೆರಳಿದ್ದ ವೇಳೆ ಮೃತದೇಹ ಸೀರೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತಿ-ಪತ್ನಿ ಇಬ್ಬರಿಗೂ ಮಸ್ಯಪಾಮನದ ಚಟವಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ರತ್ನಾ ಪತಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

Advertisements
Posted in: Local News