ಮಂತ್ರಿಮಂಡಲ ಪುನಾರಚನೆಗೆ ಯಡಿಯೂರಪ್ಪಗೆ ಹಸಿರು ನಿಶಾನೆ

Posted on May 12, 2011

0


ಬೆಂಗಳೂರು: ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಮಂತ್ರಿಮಂಡಲ ಪುನಾರಚನೆ ಸೇರಿದಂತೆ ಆಡಳಿತ ಹಾಗೂ ಪಕ್ಷದ ದೃಷ್ಟಿಯಿಂದ ರಾಜಕೀಯ ನಿರ್ಧಾರ ಗಳನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ.

ರಾಜಕೀಯ ನೇಮಕಾತಿ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಕೋರ್ ಕಮಿಟಿಯ ವಿಶ್ವಾಸ ಪಡೆದೇ ಮುಂದು ವರೆಯಬೇಕೆಂದು ಷರತ್ತು ವಿಧಿಸಿದ್ದಾರೆ. ಸರ್ಕಾರದ ಮೇಲೆ ಬರುತ್ತಿರುವ ಭ್ರಷ್ಟಾಚಾರ ಹಗರಣಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ಇಲ್ಲದಿದ್ದರೆ, ಪಕ್ಷ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ಆಡಳಿತ ವಿರುವ ಮುಖ್ಯಮಂತ್ರಿಗಳ ಸಭೆ ಮುಗಿದ ನಂತರ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಸಂದ ರ್ಭದಲ್ಲಿ ಯಡಿಯೂರಪ್ಪ ಅವ ರೊಂದಿಗೆ ಈ ಎಲ್ಲ ವಿಚಾರಗಳು ಪ್ರಸ್ತಾಪಗೊಂಡಿವೆ.

ಚುನಾವಣಾ ಫಲಿತಾಂಶ ಮುಗಿದ ನಂತರ ಒಂದು ವೇಳೆ ಅನರ್ಹಗೊಂಡ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಎದುರಾದರೆ, ರಾಜಕೀಯ ನೇಮಕಾತಿ ತೀರ್ಮಾನ ಕೈಗೊಳ್ಳದೇ ಮುಂದೂಡಿ ಎಂಬ ಸಲಹೆ ಮಾಡಿದ್ದಾರೆ.

Advertisements
Posted in: State News