ಬೈಕ್ಗೆ ಕಾರ್ ಡಿಕ್ಕಿ: ಸವಾರನಿಗೆ ಗಾಯ

Posted on May 12, 2011

0


ಕಾರ್ಕಳ: ನಗರದ ಶಿವತಿಕೆರೆ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತ ವೊಂದರಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ಸಂಭವಿಸಿದೆ.

ನಕ್ರೆ ಪರಪ್ಪು ನಿವಾಸಿ ಶ್ರೀನಿವಾಸ ಆಚಾರ್ಯ(೩೭) ಎಂಬವರು ಗಾಯಾಳುವೆಂದು ತಿಳಿದುಬಂದಿದೆ.

ಮಾರಿಪೂಜೆ ನಿಮಿತ್ತ ನಗರದ ಮಾರಿಗುಡಿ ದೇವಳಕ್ಕೆ ಬಂದು ಬೈಪಾಸ್‌ನ ಕೋಳಿ ಅಂಗಡಿಗೆ ಹೋಗುವ ತಯಾರಿಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಎಂದು

ತಿಳಿದು ಬಂದಿದೆ. ಘಟನೆಗೆ

ಕಾರಣವಾದ ಕಾರಿನ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿ ದ್ದಾನೆ. ಸ್ಥಳೀ ಯರು ಕಾರಿನ ಬಗ್ಗೆ ಪೊಲೀ ಸರಿಗೆ ಮಾಹಿತಿ ನೀಡಿದ್ದಾರೆನ್ನ ಲಾಗಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisements
Posted in: Special Report