ಬಿಎಎಸ್ಎಫ್ನಿಂದ ವಾಟರ್ ಎಜ್ಯುಕೇಷನ್ ಯೋಜನೆ

Posted on May 12, 2011

0


ಮಂಗಳೂರು: ವಿಶ್ವವಿಖ್ಯಾತ ರಾಸಾಯನಿಕ ಸಂಸ್ಥೆಯಾದ ಬಿಎಎಸ್ ಎಫ್‌ಯುಎನ್ ಹ್ಯಾಬಿಟೆಟ್‌ನೊಂದಿಗೆ ಜೊತೆಗೂಡಿ ಮಂಗಳೂರಿನಲ್ಲಿ ಶುದ್ಧೀ ಕರಣದ ಬಗ್ಗೆ ಜಾಗೃತಿ ಮೂಡಿಸುವ ಯೋಜನೆಯನ್ನು ಜಾರಿಗೆ ತರುತ್ತಿದೆ.

ಇದು ಬಿಎಎಸ್‌ಎಫ್ ಸಮಾಜ ಸೇವಾ ಪ್ರತಿಷ್ಠಾನದ ಸಹಕಾರದಲ್ಲಿ ಶಾಲೆಗಳಲ್ಲಿ ನೀರಿನ ಶುದ್ಧೀಕರಣ ಮತ್ತು ನೀರಿನ ಶುದ್ದತೆಯನ್ನು ಪರಿಶೀಲಿಸುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಯೋಜನೆ. ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟೆರಿ) ಮುಂದಿನ ಎರಡು ವರ್ಷ ಗಳಲ್ಲಿ ಈ ಯೋಜನೆಯನ್ನು ಕಾರ್ಯ ಗತಗೊಳಿಸುತ್ತದೆ ಎಂದು ಕೆ.ವಿ. ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಯೋಜನೆಯ ಮೊದಲನೇ ಹಂತವಾಗಿ ಸೌತ್ ಏಷ್ಯಾದ ಮುಖ್ಯಸ್ಥ ಹಾಗೂ ಭಾರತದಲ್ಲಿ ಬಿಎಎಸ್‌ಎಫ್ ಕಂಪೆನಿಗಳ ಚೇಯರ್‌ಮ್ಯಾನ್ ಶ್ರೀ ಪ್ರಸಾದ್ ಚಂದ್ರನ್, ಬಿಎಎಸ್‌ಎಫ್‌ನ ಸಮಾಜ ಸೇವಾ ಪ್ರತಿಷ್ಠಾನ ಮುಖ್ಯಸ್ಥ ಡಾ. ಹಾರ್ಟ್‌ಮಟ್ ವುಂಗರ್, ವಿಶ್ವ ಸಂಸ್ಥೆ ಹ್ಯಾಬಿಟೆಟ್‌ನ ನೀರು ಹಾಗೂ ನೈರ್ಮಲ್ಯ ವಿಭಾಗದ ಮುಖ್ಯಸ್ಥ ಆಂದ್ರೆ ಜೈಕಸ್ ಹಾಗೂ ಟೆರಿಯ ಹಿರಿಯ ಸಲಹೆಗಾರ ಹಾಗೂ ನಿರ್ದೇಶಕರು ಪ್ರಣಬ್ ದಾಸ್‌ಗುಪ್ತಾ ಇವರುಗಳು ಮನಪಾದ ಮೇಯರ್ ಪ್ರವೀಣ್‌ರವರಿಗೆ ಪ್ರಸ್ತಾವನೆಯನ್ನು ಹಸ್ತಾಂತರಿಸಿದರು.

ಮಂಗಳೂರಿನಲ್ಲಿ ನಡೆದ ಈ ಕಾರ‍್ಯ ಕ್ರಮದಲ್ಲಿ ರಾಜಕೀಯ ಮುಖಂಡರು, ನಾಗರಿಕ ಮುಖ್ಯಸ್ಥರು, ಕೈಗಾರಿಕೋದ್ಯ ಮಿಗಳು ಮತ್ತು ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು. ಬಿಎಎಸ್‌ಎಫ್ ಸಂಸ್ಥೆಯ ಸುತ್ತಮುತ್ತಲಿನ ಪರಿಸರದ ಸಂರಕ್ಷಣೆಯ ಕಾಳಜಿ ಯೊಂದಿಗೆ ಸಾಮಾಜಿಕ ಯೋಜ ನೆಗಳನ್ನೂ ಅನುಷ್ಠಾನಗೊಳಿಸಿ ತನ್ನ ವ್ಯವಹಾರವನ್ನು ಮುಂದುವರಿಸಿ ಕೊಂಡಿದೆ ಎಂದು ಪ್ರಸಾದ್ ಚಂದ್ರನ್‌ರವರು ತಿಳಿಸಿದರು.

Advertisements
Posted in: Local News