ಬಸ್‌ಗಳ ಡಿಕ್ಕಿ: ಹಲವರಿಗೆ ಗಾಯ

Posted on May 12, 2011

0


ಕಾಸರಗೋಡು: ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಒಂದು ಬಸ್ ರಸ್ತೆ ಬದಿಯ ಆಳವಾದ ಕಂದಕಕ್ಕೆ ಉರುಳಿ ಮರಕ್ಕೆ ಸಿಲುಕಿ ಕೊಂಡಿದ್ದರಿಂದ ಭಾರೀ ಅಪಾಯ ತಪ್ಪಿದಂತಾಗಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಾತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿ ಸಲಾಗಿದೆ.

ಎಡನೀರು ತಿರುವು ಬಳಿ ಬುಧ ವಾರ ಸಂಜೆ ಘಟನೆ ಸಂಭವಿಸಿದ್ದು, ಕಾಸರಗೋಡು ಮಲ್ಲಕ್ಕೆ ತೆರಳುತ್ತಿದ್ದ ಅಕ್ಸಾ ಮೋಟರ್ಸ್ ಹಾಗೂ ಮುಳ್ಳೇರಿ ಯಾದಿಂದ ಕಾಸರಗೋಡಿಗೆ ಬರುತ್ತಿದ್ದ ದುರ್ಗಾದೇವಿ ನಾಮಾಂಕಿತ ಬಸ್ ಗಳೆರಡರ ನಡುವೆ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಚಾತಪ್ಪಾಡಿಯ ಬಶೀರ್, ರಮಣಿ, ಕುಂಞಿಕಣ್ಣ, ಮಾಧವ, ಪೈಕ ನಿವಾಸಿಗಳಾದ ಆಯಿಷಾ, ರಾಜೇಶ್ವರಿ, ಮಲ್ಲದ ಅಬ್ದುಲ್ ಖಾದರ್, ಕೂಡ್ಲುವಿನ ಅಜಿತ್ ಕುಮಾರ್, ಎದಿತೋರ್ಡಿನ ಎಂ.ಭವಾನಿ, ಮಧೂರಿನ ಅನಿತ್ ಕುಮಾರ್, ಸಿಟಿಜನ್ ನಗರದ ರಹಮತ್, ಸಾಲೆತ್ತೂರಿನ ಸತ್ಯನ್ ಮೊದಲಾದವರು ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisements
Posted in: Special Report