ಪಿಯುಸಿ ಹುಡುಗನನ್ನೂ ಹಿಡಿದರು!

Posted on May 12, 2011

0


ನಿನ್ನೆ ಬೆಳಿಗ್ಗೆಯೇ ಕಾರ್ಯಪ್ರವೃತ್ತರಾದ ಇಲಾಖೆಯ ಅಧಿಕಾರಿ ಗಳು ಧಕ್ಕೆಯಲ್ಲಿ ಮೀನು ಹೆಕ್ಕುತ್ತಿದ್ದ ಹತ್ತು ಮಂದಿ ಮಕ್ಕಳನ್ನು ವಶಕ್ಕೆ ತೆಗೆದುಕೊಂಡು ತಮ್ಮ ಕಾರ್ಯ ಸಾಧನೆಯಾಯಿತು ಎಂದು ಬೀಗಿದ್ದರು. ಆದರೆ ಅವರನ್ನು ವೆನ್ಲಾಕ್ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದಾಗ ಮೂರು ಮಂದಿ ೧೪ ವರ್ಷಕ್ಕಿಂತ ಮೇಲ್ಪಟ್ಟವರೆಂಬ ಮಾಹಿತಿ ಲಭಿಸಿದೆ. ಇದೇ ವೇಳೆ ಓರ್ವ ಹುಡುಗನ ತಂದೆಯು ಶಾಲಾ ಪ್ರಮಾಣ ಪತ್ರದೊಂದಿಗೆ ಅಧಿಕಾರಿಗಳ ಮುಂದೆ ಹಾಜರಾಗಿ ತನ್ನ ಮಗ ಅಪ್ರಾಪ್ತನಲ್ಲ. ಆತ ಪಿಯುಸಿ ವಿದ್ಯಾರ್ಥಿಯೆನ್ನುವ ಮಾಹಿತಿ ನೀಡಿದ್ದು ಅಧಿಕಾರಿಗಳಿಗೆ ಮುಜುಗರ ತರಿಸುವಂತಿತ್ತು.

Advertisements
Posted in: Special Report