ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

Posted on May 12, 2011

0


ಮಂಗಳೂರು: ಕಳೆದ ಒಂದು ತಿಂಗಳ ಹಿಂದೆ ಬಂಟ್ವಾಳ ತಾಲೂಕಿನ ಕೊಲ ಗ್ರಾಮದಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಶವ ನಿನ್ನೆ ಪತ್ತೆಯಾಗಿದೆ.

ಬಂಟ್ವಾಳದ ಕೊಲ ನಿವಾಸಿ ಸಂಜೀವ ಎಂಬವರ ಪತ್ನಿ ರತ್ನಾ (೪೮) ಎಂಬವರ ಮೃತದೇಹ ಪತ್ತೆಯಾಗಿದ್ದು, ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಿನ್ನೆ ಅವರ ಶವ ಮನೆ ಸಮೀಪದ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಈ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯವ್ಯಸನಿ ಸಾವು

ವಿಟ್ಲ: ಇಲ್ಲಿನ ನೆಟ್ಲಮುಡ್ನೂರು ಗ್ರಾಮದ ಕುಕ್ಕಾರೆಬೆಟ್ಟು ನಿವಾಸಿ ಭಾಸ್ಕರ ಎಂಬವರು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ. ವಿಪರೀತವಾಗಿ ಕುಡಿತದ ಚಟವನ್ನು ಹೊಂದಿದ್ದ ಇವರು ಮಾಣಿ, ಮಿತ್ತೂರು, ಕಬಕ ಮೊದಲಾದೆಡೆ ಅಲೆದಾಡುತ್ತಿದ್ದು, ನಿನ್ನೆ ವಿಟ್ಲದಲ್ಲಿ ಕುಸಿದು ಬಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ.

Advertisements
Posted in: Local News