ದಾವೂದ್ ಆಸ್ತಿ ಮುಟ್ಟುಗೋಲಿಗೆ ಹಿಂಜರಿಯಲ್ಲ: ಅಶ ೋಕ್

Posted on May 12, 2011

0


ಬೆಂಗಳೂರು: ಅಂತಾರಾಷ್ಟ್ರೀಯ ಭಯೋತ್ಪಾದಕ ದಾವುದ್ ಇಬ್ರಾಹಿಂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಗೃಹ ಸಚಿವ ಆರ್. ಅಶೋಕ್ ಅವರು ತಿಳಿಸಿದರು.

ತಮ್ಮನ್ನು ಭೇಟಿಯಾಗಿ ಮಾತನಾಡಿದ ಅವರು, ದಾವುದ್ ಆಸ್ತಿ ದೇಶಾದ್ಯಂತ ಇರುವ ಗುಮಾನಿ ಇದೆ. ಆತನ ಆಸ್ತಿ ಮುಟ್ಟುಗೋಲಿಗೆ ಕೇಂದ್ರದಿಂದ ಆದೇಶ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಕೇಂದ್ರದಿಂದ ಈ ಸಂಬಂಧ ಯಾವುದೇ ಆದೇಶ ಬಂದಿಲ್ಲ. ರಾಜ್ಯ ಕೇಂದ್ರದ ಆದೇಶವನ್ನೇ ಎದುರು ನೋಡುತ್ತಿದೆ. ಒಸಾಮಾ ಬಿನ್ ಲಾಡೆನ್ ಹತ್ಯೆ ನಂತರ ವಿಶ್ವದ ಗಮನ ದಾವುದ್ ಕಡೆಗೆ ಹರಿದಿದೆ. ಆತನ ಆಸ್ತಿ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುವುದು ಎಂಬುದನ್ನು ಎದುರು ನೋಡಲಾ ಗುತ್ತಿದೆ ಎಂದರು.

Advertisements
Posted in: State News