ತಾ.ಪಂ. ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತರಾ ಟೆಗೆ

Posted on May 12, 2011

0


ಪುತ್ತೂರು: ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸುವಂತೆ ತಾ.ಪಂ.ಸಭೆಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅರಣ್ಯ ಇಲಾಖೆಗೆ ಸೂಚಿಸುತ್ತಿದ್ದರೂ ಈ ತನಕ ತೆರವು ಕಾರ್ಯಾಚರಣೆ ನಡೆಸಲಾಗಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಇಚ್ಚಾಶಕ್ತಿ ಇಲ್ಲ. ತನ್ನ ತಪ್ಪನ್ನು ಮರೆಮಾಚಲು ಇಲಾಖೆಯು ವಿವಿದ ಕಾರಣಗಳನ್ನು ಹೇಳುತ್ತಾ ಅಪಾಯಕಾರಿ ಮರಗಳ ತೆರವಿಗೆ ವಿಳಂಬ ಮಾಡುತ್ತಿದೆ ಎಂದು ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಅರಣ್ಯ ಇಲಾಖಾ ಅಧಿಕಾರಿ ಗಳನ್ನು ತರಾಟೆಗೆತ್ತಿಕೊಂಡ ಘಟನೆ ಬುಧವಾರ ನಡೆಯಿತು.

ತಾ. ಪಂ.ನ ಸಾಮಾನ್ಯ ಸಭೆಯು ಅಧ್ಯಕ್ಷರಾದ ಡಿ. ಶಂಭು ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯರು ನೆಟ್ಟಣ, ಬಿಳಿನೆಲೆ ಸೇರಿದಂತೆ ತಾಲೂಕಿನ ವಿವಿಧ ಕಡೆ ಗಳಲ್ಲಿ ರಸ್ತೆ ಬದಿಯಲ್ಲಿರುವ ಅಪಾಯ ಕಾರಿ ಮರಗಳನ್ನು ತೆರವುಗೊಳಿಸುವಂತೆ ಹಲವಾರು ಬಾರಿ ಚರ್ಚಿಸಿ ನಿರ್ಣಯ ಕೈಗೊಂಡು ಅಧಿಕಾರಿಗಳಿಗೆ ಸೂಚಿಸ ಲಾಗಿದ್ದರೂ ಕ್ರಮ ಕೈಗೊಂಡಿಲ್ಲ ಕಾರಣ ಹೇಳಿ ತಪ್ಪಿಸುತ್ತಿದ್ದಾರೆ ಎಂದು ಜಿ.ಪಂ ಸದಸ್ಯ ಭಾಸ್ಕರ ಬಾಣಜಾಲು ಆರೋಪಿ ಸಿದರು.

ಇದಕ್ಕೆ ಉತ್ತರಿಸಿದ ಅರಣ್ಯ ಅಧಿಕಾ ರಿಗಳು ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆಯಲಾಗಿದೆ ಎಂದು ಹೇಳಿದರು. ಇದರಿಂದ ಇನ್ನಷ್ಟು ಕೆರಳಿದ ಭಾಸ್ಕರ ಭಾಣಜಾಲು ಹಾಗೂ ಇನ್ನಿತರರು ಅಧಿಕಾರಿಗಳಿಗೆ ಇಚ್ಚಾಶಕ್ತಿ ಇಲ್ಲ ಅದಕ್ಕೆ ಇಂತಹ ಕಾರಣಗಳನ್ನು ನೀಡುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಜನಸಾಮಾ ನ್ಯರ ಮಾತಿಗೆ ಬೆಲೆ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಇವರಿಗೆ ಮೇಲಿಂದ ಆದೇಶ ಬರುವಾಗ ಜನರು ಮರಗಳಿಂದ ಅವಘಡ ಸಂಭವಿಸಿ ಜನ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀವು ಮೇಲಧಿಕಾರಿಗಳಿಗೆ ಬರೆದ ಪತ್ರವನ್ನು ನಮಗೆ ನೀಡಿ ನಾವು ಈ ಕೆಲಸ ಮಾಡಿಸುತ್ತೇವೆ. ಮೊದಲಿಗೆ ಕಳೆದ ನಾಲ್ಕು ವರ್ಷಗಳಿಂದ ತಾ.ಪಂ. ಸದಸ್ಯರು ಮರ ತೆರವಿಗೆ ಜನಪ್ರತಿನಿಧಿಗಳು ಹೇಳು ತ್ತಿದ್ದರೂ ಈ ತನಕ ಅರಣ್ಯ ಇಲಾಖೆಯು ಈ ಬಗ್ಗೆ ಕನಿಷ್ಟ ಸಮೀಕ್ಷೆಯನ್ನೂ ನಡೆಸಿಲ್ಲ. ನಮ್ಮನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿ ದ್ದಾರೆ ಎಂದು ಆರೋಪಿಸಿದರು. ಅಧ್ಯಕ್ಷ ಶಂಭು ಭಟ್ ಅವರು ತಕ್ಷಣವೇ ಮೇಲಾಧಿ ಕಾರಿಗಳಿಗೆ ಬರೆದ ವಿವರವನ್ನು ತಂದೊಪ್ಪಿ ಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisements
Posted in: Special Report