ಡೊನಾಲ್ಡ್ಗಾಗಿ ಕಿವೀಸ್- ಆಸೀಸ್ ಹೋರಾಟ

Posted on May 12, 2011

0


ಮೆಲ್ಬೊರ್ನ್: ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಅಲನ್ ಡೊನಾಲ್ಡ್ ಆಸ್ಟ್ರೇಲಿಯಾದ ಬೌಲಿಂಗ್ ಕೋಚ್ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ನ್ಯೂಜಿಲೆಂಡ್ ಮಾತ್ರ ಅವರನ್ನು ಬಿಟ್ಟುಕೊಡಲು ತಯಾರಿಲ್ಲ.

ಡೊನಾಲ್ಡ್ ಈಗ ನ್ಯೂಜಿಲೆಂಡ್‌ನ ಬೌಲಿಂಗ್ ಕೋಚ್ ಆಗಿದ್ದು, ವಿಶ್ವಕಪ್‌ನಲ್ಲಿ ಕಿವೀಸ್ ಸೆಮಿಫೈನಲಿಗೇರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಡೊನಾಲ್ಡ್ ಅವರನ್ನು ಕಿವೀಸ್ ತಂಡದೊಂದಿಗೆ ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಆಸೀಸ್‌ನ ಮಾಜಿ ಹಾಗೂ ಹಾಲಿ ನ್ಯೂಜಿಲೆಂಡ್ ಕ್ರಿಕೆಟಿನ ನಿರ್ದೇಶಕ ಜಾನ್ ಬುಕನಾನ್ ತಿಳಿಸಿದ್ದಾರೆ.

ಇನ್ನು ಹಲವಾರು ಅಂತಾರಾಷ್ಟ್ರೀಯ ಟೂರ್ನಮೆಂಟ್‌ಗಳಿಗೆ ಡೊನಾಲ್ಡ್ ಸೇವೆಯನ್ನು ಪಡೆಯಲು ಬಯಸಿದ್ದೇವೆ ಎಂದು ಬುಕನಾನ್ ಹೇಳಿದರು.

Advertisements
Posted in: Sports News