ಟೆಂಪೋ ಕ್ಯಾಬಿನ್ನೊಳಗೆ ಸಿಲುಕಿದ ಚಾಲಕ!

Posted on May 12, 2011

0


ಕಾರ್ಕಳ: ಟೆಂಪೋವೊಂದು ಚಲಿಸುತ್ತಿದ್ದಾಗ ಅದರ ಕ್ಯಾಬಿನ್ ಕಳಚಿದ ಪರಿಣಾಮ ಚಾಲಕ ಅದರೊಳಗೆ ಸಿಲುಕಿ ಕೂದಲೆಳೆಯ ಅಂತರದಲ್ಲಿ ಬದುಕಿದ ಘಟನೆ ತಾಲೂಕು ಕಚೇರಿ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಅಜೆಕಾರು ಗುಡ್ಡೆಯಂಗಡಿಯ ನಿವಾಸಿ ವಿಜಯ ನಾಯಕ್(೩೮) ಎಂಬವರು ಘಟನೆಯಲ್ಲಿ ಗಾಯಗೊಂ ಡವರು. ನಿನ್ನೆ ಬೆಳಿಗ್ಗೆ ಇವರು ಮುನಿಯಾಲುವಿನಿಂದ ಮೂಡಬಿದ್ರಿ ಕಡೆಗೆ ಟೆಂಪೋವನ್ನು ಚಲಾಯಿಸಿ ಕೊಂಡು ಹೋಗುತ್ತಿದ್ದಾಗ ಅದರ ಕ್ಯಾಬಿನ್ ಕಳಚಿ ಬೇರ್ಪಟ್ಟಿತ್ತು. ಪರಿಣಾಮವಾಗಿ ಅವರು ಅದರೊಳಗೆ ಸಿಲುಕಿಕೊಂಡಿದ್ದರು. ಜನವಸತಿ ಪ್ರದೇಶದಲ್ಲಿ ಘಟನೆ ಸಂಭವಿಸಿರುವು ದರಿಂದ ಅಪಾಯದಲ್ಲಿ ಸಿಲುಕಿಕೊಂ ಡಿದ್ದ ಚಾಲಕನನ್ನು ಸ್ಥಳೀಯರು ಜೀವಾಪಾಯದಿಂದ ಪಾರು ಮಾಡಿ ದ್ದಾರೆ.

Advertisements
Posted in: Local News