ಚಿಯರ್ ಲೀಡರ್ಸ್ಗಳ ಹಿಂದೆ ಬೀಳುವ ಯುವ ಆಟಗಾರರು

Posted on May 12, 2011

0


ಬೌಂಡರಿ, ಸಿಕ್ಸರ್ ಸಿಡಿಸಿದಾಗ, ವಿಕೆಟ್ ಬಿದ್ದಾಗ ತಮ್ಮ ಡ್ಯಾನ್ಸ್‌ನಿಂದ ಪ್ರೇಕ್ಷಕರನ್ನು ಮನತಣಿಸುತ್ತಿದ್ದ ಚಿಯರ್ ಲೀಡರ‍್ಸ್‌ಗಳು ರಾತ್ರಿಯಾಗುತ್ತಿದ್ದಂತೆ ಕತ್ತಲಿನ ಪಾರ್ಟಿಗಳಲ್ಲಿ ಕ್ರಿಕೆಟಿಗರ ಮುಂದೆ ಬೆತ್ತಲಾಗುವಂತಹ ಸನ್ನಿವೇಶಗಳು ಕೂಡ ಇದ್ದವು ಎನ್ನುವುದನ್ನು ಬಹಿರಂಗಪಡಿಸಿದ ದಕ್ಷಿಣ ಆಫ್ರಿಕಾದ ಚಿಯರ್ ಲೀಡರ‍್ಸ್ ಒಬ್ಬಳು ಈಗ ನೇರ ಮನೆಗೆ ಟಿಕೆಟ್ ಪಡೆದಿದ್ದಾಳೆ.

ಎಲ್ಲರ ಮನರಂಜಿಸುವ ಚಿಯರ್‌ಲೀಡರ‍್ಸ್‌ಗಳು ಪಂದ್ಯದ ಬಳಿಕ ನಡೆಯುವ ಪಾರ್ಟಿಗಳಲ್ಲಿ ಕೂಡ ಕಾಣಿಸಿಕೊಳ್ಳಬೇಕಾಗಿತ್ತು. ಇಲ್ಲಿನ ವಿಐಪಿ ರೂಮ್‌ನಲ್ಲಿ ಚಿಯರ್‌ಲೀಡರ‍್ಸ್‌ಗಳನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಕ್ರಿಕೆಟಿಗರು ಹಾಗೂ ವಿಐಪಿಗಳು ನಾ ಮುಂದು, ತಾ ಮುಂದು ಎನ್ನುತ್ತಿದ್ದರು ಎಂದು ದ. ಆಫ್ರಿಕಾದ ಚಿಯರ್ ಲೀಡರ್ ಗ್ಯಾಬ್ರಿಯೆಲ್ಲಾ ಪಸ್ಕ್ವೆಲೊಟ್ಟೊ ಟ್ವಿಟ್ಟರ್‌ನಲ್ಲಿ ಬರೆದದ್ದು ಈಗ ದೊಡ್ಡ ವಿವಾದವಾಗಿದೆ. ಆಕೆಗೆ ಮುಂಬಯಿ ಇಂಡಿಯನ್ಸ್ ಗೇಟ್ ಪಾಸ್ ನೀಡಿ ಸ್ವದೇಶಕ್ಕೆ ಕಳುಹಿಸಿದೆ.

ತನ್ನನ್ನು ಸ್ವದೇಶಕ್ಕೆ ಕಳುಹಿಸಿರುವುದು ದೊಡ್ಡ ಅಪರಾಧ. ಎಲ್ಲಾ ಒಪ್ಪಂದಗಳನ್ನು ಮುರಿಯಲಾಗಿದೆ. ನಾನು ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇನೆ ಎಂದು ಪಸ್ಕ್ವೆಲೊಟ್ಟೊ ತಿಳಿಸಿದ್ದಾಳೆ. ಕಳೆದ ಐಪಿಎಲ್ ವೇಳೆ ಇದೇ ರೀತಿ ನೈಟ್ ಪಾರ್ಟಿಗಳಲ್ಲಿ ಕುಡಿದು ತೂರಾಡುತ್ತಿದ್ದ ಕ್ರಿಕೆಟಿಗರ ಪ್ರದರ್ಶನದ ಮೇಲೆ ಭಾರೀ ಪರಿಣಾಮ ಬೀರಿದ ಕಾರಣ ಬಿಸಿಸಿಐ ಇದಕ್ಕೆ ಕಡಿವಾಣ ಹಾಕಿತ್ತು. ಆದರೆ ಈ ಸಲ ತಡರಾತ್ರಿ ಪಾರ್ಟಿಗಳು ತುಂಬಾ ಕಡಿಮೆಯಾಗಿದ್ದು, ಈಗ ಅಪರೂಪದ ಪಾರ್ಟಿಗಳು ಕೂಡ ವಿವಾದವನ್ನು ಸೃಷ್ಟಿಸಿವೆ. ಮೂರನೇ ಪುಟಕ್ಕೆ

Advertisements
Posted in: Special Report