ಗೇಲ್ ಎದುರು ಗೆಲ್ಲಲಾಗದ ರಾಜಸ್ಥಾನ

Posted on May 12, 2011

0


ಜೈಪುರ: ಮತ್ತೊಮ್ಮೆ ಬೌಲರ್ ಗಳನ್ನು ಧೂಳೀಪಟ ಮಾಡಿದ ಗೇಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ರಾಯಲ್ ಚಾಲೆಂಜರ‍್ಸ್ ೯ ವಿಕೆಟ್‌ಗಳ ಭರ್ಜರಿ ಗೆಲುವಿ ನೊಂದಿಗೆ ಮುಂದಿನ ಸುತ್ತಿನ ಹಾದಿಯನ್ನು ಸುಗಮಗೊಳಿಸಿದೆ.

೧೪೭ ರನ್‌ಗಳ ಸುಲಭ ಗೆಲುವಿನ ಗುರಿಯನ್ನು ಬೆನ್ನಟ್ಟುತ್ತಿದ್ದ ಬೆಂಗ ಳೂರಿಗೆ ಗೇಲ್ ಮತ್ತು ದಿಲ್‌ಶಾನ್ ಭರ್ಜರಿ ಆರಂಭವನ್ನು ಒದಗಿಸಿ ಕೊಟ್ಟರು. ಇವರಿಬ್ಬರು ಮೊದಲ ವಿಕೆಟಿಗೆ ೬೮ ರನ್‌ಗಳ ಜೊತೆಯಾಟ ನಡೆಸಿಕೊಟ್ಟ ಬಳಿಕ ಗೇಲ್ ಮತ್ತು ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು. ಕೊಹ್ಲಿ ಸಿಕ್ಸರ್ ಬಾರಿಸಿ ಇನ್ನೂ ೧೮ ಎಸೆತ ಬಾಕಿಯಿರುವಂತೆ ತಂಡಕ್ಕೆ ಗೆಲುವು ತಂದಿತ್ತರು. ಗೇಲ್ ೪೪ ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್‌ಗಳ ಸಹಿತ ೭೦ ರನ್, ಕೊಹ್ಲಿ ೩೪ ಎಸೆತಗಳಲ್ಲಿ ಒಂದು ಸಿಕ್ಸ್ ಮತ್ತು ಮೂರು ಬೌಂಡರಿಯೊಂದಿಗೆ ೩೯ ರನ್ ಬಾರಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನಕ್ಕೆ ದ್ರಾವಿಡ್ ಮತ್ತು ವಾಟ್ಸನ್ ಭರ್ಜರಿ ಆರಂಭ ವನ್ನು ಒದಗಿಸಿಕೊಟ್ಟರು. ಅವರಿಬ್ಬರು ಮೊದಲ ವಿಕೆಟಿಗೆ ೭೩ ರನ್‌ಗಳ ಜೊತೆ ಯಾಟ ನಡೆಸಿದರು. ಆದರೆ ಬೆಂಗ ಳೂರು ಬೌಲರ್‌ಗಳಿಗೆ ಮಾರಕವಾಗಿದ್ದ ವಾಟ್ಸನ್ ವಿಕೆಟ್ ಪಡೆದ ವೇಗಿ ಅರವಿಂದ್ ರಾಜಸ್ಥಾನಕ್ಕೆ ಮೊದಲ ಆಘಾತವಿಕ್ಕಿದರು. ಈ ಜೊತೆಯಾಟ ಬೇರ್ಪಟ್ಟ ಬಳಿಕ ಬೆಂಗಳೂರು ಬೌಲರ್‌ಗಳು ಮೇಲುಗೈ ಸಾಧಿಸಿದರು. ೨೯ ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿದ ವಾಟ್ಸನ್ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಲಿ ಯರ್ಸ್‌ಗೆ ಕ್ಯಾಚಿತ್ತರು.

ವನ್‌ಡೌನ್ ಬ್ಯಾಟ್ಸ್‌ಮೆನ್ ಅಜಿಂಕ್ಯೆ ರಹಾನೆ ಕ್ರೀಸಿನಲ್ಲಿದ್ದ ದ್ರಾವಿಡ್‌ಗೆ ಜತೆ ನೀಡಲು ಬಂದರು. ಆದರೆ ವಾಟ್ಸನ್ ನಿರ್ಗಮಿಸಿದ ಓವರ್‌ನಲ್ಲೇ ದ್ರಾವಿಡ್ ರಿಟರ್ನ್ ಕ್ಯಾಚಿತ್ತು ಪೆವಿಲಿಯನ್ ದಾರಿ ಹಿಡಿದಾಗ ರಾಜಸ್ಥಾನ ಮತ್ತೊಂದು ಆಘಾತಕ್ಕೊಳಗಾಯಿತು. ದ್ರಾವಿಡ್ ೩೧ ಎಸೆತಗಳಲ್ಲಿ ಆರು ಬೌಂಡರಿ ಸಹಿತ ೩೭ ರನ್ ಬಾರಿಸಿದರು. ಆರಂಭಿಕ ರಿಬ್ಬರನ್ನು ಪೆವಿಲಿಯನ್‌ಗೆ ಅಟ್ಟಿದ ಬೆಂಗಳೂರು ಬೌಲರ್‌ಗಳು ರನ್‌ಗತಿಗೆ ಕೂಡ ಕಡಿವಾಣ ಹಾಕಿದರು.

ರಹಾನೆ ಕೇವಲ ೧೭ ರನ್ ಮಾಡಿ ರನೌಟ್ ಆದರೆ, ೧೯ ರನ್ ಮಾಡಿದ ಬೋಥಾ ವಿಕೆಟ್ ಹಿಂದುಗಡೆ ಕ್ಯಾಚಿತ್ತರು. ರಾಜಸ್ಥಾನದ ಭರವಸೆಯ ಆಟಗಾರ ಟೇಲರ್ ಇನ್ನೇನೂ ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ಮಾಡಬಹುದೆಂದು ಭಾವಿಸುತ್ತಿರು ವಂತೆ ಲ್ಯಾಂಗ್‌ವೆಲ್ಡ್ ಅದಾಗಲೇ ಟೇಲರ್‌ಗೆ ಪೆವಿಲಿಯನ್ ದಾರಿ ತೋರಿಸಿಯಾಗಿತ್ತು. ಅರವಿಂದ್ ಮೂರು, ಲ್ಯಾಂಗ್‌ವೆಲ್ಡ್ ಮತ್ತು ಗೇಲ್ ತಲಾ ಒಂದು ವಿಕೆಟ್ ಉರುಳಿಸಿದರು.

Advertisements
Posted in: Sports News