ಕಾರವಾರ-ಬೆಂಗಳೂರು ರೈಲು ನಿಲುಗಡೆ ವಂಚಿತ ಕುಂದಾ ಪುರ

Posted on May 12, 2011

0


ಕುಂದಾಪುರ: ಕುಂದಾಪುರ ಸಾರ್ವಜನಿಕರ ಬಹುನಿರೀಕ್ಷೆಯ ಬೆಂಗಳೂರು ರೈಲು ನನಸಾಗುವ ಹಾದಿ ಯಲ್ಲಿದ್ದರೂ ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತೆ ಕಾರವಾರ-ಬೆಂಗಳೂರು ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ಅಸಾಧ್ಯವೆನ್ನುವ ಸುದ್ದಿ ಕೇಳಿಬರುತ್ತಿದೆ.

ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಪ್ರಮಾಣದ ಬೆಂಗಳೂರು ಪ್ರಯಾಣಿಕರ ಸಂಖ್ಯೆಯನ್ನು ಹೊಂದಿರುವ ಹೆಗ್ಗಳಿಕೆ ಹೊಂದಿರುವ ಕುಂದಾಪುರ ತಾಲೂಕನ್ನು ಬಸ್ ಮಾಲೀಕರ ಲಾಬಿಗೆ ಮಣಿದು ರೈಲಿನ ನಿಲುಗಡೆಯನ್ನು ಬೇಕೆಂದೇ ರದ್ದು ಮಾಡಲಾಗಿದೆಯೆಂದು ಹೇಳಲಾಗುತ್ತಿದೆ. ಕುಂದಾಪುರ ತಾಲೂಕಿನಾದ್ಯಂತ ಹೊಟೇಲ್, ಬೇಕರಿ ಉದ್ದಿಮೆದಾರರು, ಕಾರ್ಮಿಕರು, ಸರಕಾರಿ, ಕಂಪೆನಿ ಸಿಬ್ಬಂದಿಗಳು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಬೆಂಗಳೂರನ್ನೇ ನೆಚ್ಚಿಕೊಂಡಿದ್ದಾರೆ. ಹಾಗಾಗಿ ತಾಲೂಕಿ ನಿಂದ ಬೆಂಗಳೂರಿಗೆ ನೂರಾರು ಸಂಖ್ಯೆಯ ಬಸ್‌ಗಳು ದಿನನಿತ್ಯವೆಂಬಂತೆ ಸಂಚರಿಸುತ್ತಿವೆ. ಹೀಗಾಗಿ ಬಸ್ ಮಾಲೀಕರ ಸರ್ವಾಧಿಕಾರವೇ ಬಸ್ ಪಯಣಿಕರನ್ನು ತಮ್ಮ ಮರ್ಜಿಗೆ ತಕ್ಕಂತೆ ನಿಯಂತ್ರಿಸುತ್ತದೆ.

ಆಫ್‌ಸೀಸನ್‌ಗೆ ಒಂದು ರೇಟಾದರೆ ಸೀಸನ್‌ನಲ್ಲಿ ಮಾಲೀಕರು ಹೇಳಿದ್ದೆ ರೇಟ್. ಆದರೂ ಪ್ರಯಾಣಿಕರು ಉಫ್ ಎಂದು ಉಸಿರೆತ್ತುವಂತಿಲ್ಲಾ ಎಂತಹಾ ಗುಜರಿ ಬಸ್‌ಗಳಲ್ಲೂ ಅತ್ಯಧಿಕ ಬೆಲೆಯಲ್ಲಿ ಬೆಂಗಳೂರಿಗೆ ಪಯಣಿಸಲೇ ಬೇಕಾಗಿರುವುದು ಕುಂದಾಪುರ ಹಾಗೂ ಆಸುಪಾಸಿನ ಪ್ರಯಾಣಿಕರ ನಿತ್ಯ ದುರಂತವಾಗಿತ್ತು. ಹೀಗಾಗಿ ಬೆಂಗ ಳೂರು ಪ್ರಯಾಣಿಕರಿಗೆ ಪರ್ಯಾ ಯವಾಗಿ ಬೆಂಗಳೂರು ರೈಲು ಅತ್ಯಗತ್ಯ ಅವಶ್ಯಕತೆಯಾಗಿತ್ತು. ಹಲವು ವರ್ಷಗಳ ಉಂಟು-ಇಲ್ಲಾ ಆಯೋಮಯ ಸ್ಥಿತಿಯಲ್ಲಿ ಕೊನೆಗೂ ಕಾರವಾರ ಬೆಂಗಳೂರು ರೈಲಿಗೆ ಹಸಿರು ನಿಶಾನೆ ದೊರಕಿದೆ. ಈ ವಿಳಂಬದ ಹಿಂದೆ ಬಸ್ ಮಾಲೀಕರ ಲಾಬಿಯೂ ಕೆಲಸ ಮಾಡಿದೆಯೆಂಬ ಆರೋಪಗಳೂ ಕೇಳಿ ಬಂದಿದ್ದವು.ಆದರೆ ಇದೀಗ ಬೆಂಗಳೂ ರಿಗೆ ರೈಲು ಆರಂಭವಾಗುತ್ತಿದ್ದರೂ ಕುಂದಾಪುರದಲ್ಲಿ ನಿಲುಗಡೆಯಲ್ಲಿ ರುವುದರಿಂದ ಸದ್ಯ ಬೆಂಗಳೂರು ರೈಲು ಪ್ರಯಾಣವೆನ್ನುವುದು ಕುಂದಾಪುರದ ವರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಅಷ್ಟರ ಮಟ್ಟಿಗೆ ಬಸ್ ಲಾಬಿ ಮೇಲುಗೈ ಸಾಧಿಸಿದೆ ಎಂದು ಹೇಳಲಾಗುತ್ತಿದೆ.

Advertisements
Posted in: Special Report