ಎಂಡೋಸಲ್ಫಾನ್: ಯುವಕ ಆಸ್ಪತ್ರೆಗೆ

Posted on May 12, 2011

0


ಮಂಗಳೂರು: ಎಂಡೋ ಸಲ್ಫಾನ್ ಕೀಟನಾಶಕ ಸಿಂಪಡನೆಯ ದುಷ್ಪರಿಣಾಮ ಕ್ಕೊಳಗಾಗಿರುವ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಉಪ್ಪಾರಪಲ್ಕೆ ಜನಾರ್ದನ (೨೪) ಎಂಬ ಯುವಕ ಅಸ್ವಸ್ತಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಶ್ವಾಸಕೋಶ ಸಮಸ್ಯೆ ಹಾಗೂ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಜನಾರ್ದನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರ ಮನೆಯ ಬಳಿಯೇ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ತೋಟವಿದ್ದು, ಅಲ್ಲಿ ಎಂಡೋಸಲ್ಫಾನ್ ಸಿಂಪಡಿಸಲಾಗುತ್ತಿತ್ತು ಎಂದು ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ತಿಳಿಸಿದ್ದಾರೆ.

ತೀರಾ ಬಡವರಾಗಿರುವ ಜಿನ್ನಪ್ಪ ಗೌಡರ ನಾಲ್ಕು ಮಕ್ಕಳಲ್ಲಿ ಜನಾರ್ದನ ಓರ್ವನೇ ಗಂಡು ಮಗು. ಉಳಿದವರು ಹೆಣ್ಣು ಮಕ್ಕಳು. ಜನಾರ್ದನರ ಚಿಕಿತ್ಸೆಗಾಗಿ ಸಾರ್ವಜನಿಕರು ಎಂಟು ಸಾವಿರ ರೂ. ಸಂಗ್ರಹಿಸಿಕೊಟ್ಟಿದ್ದಾರೆ. ಎಂಡೋಸಲ್ಫಾನ್‌ನಿಂದ ಜನರು ಈ ರೀತಿ ಸಂಕಷ್ಟ ಪಡುತ್ತಿರುವುದು ಕಣ್ಣಿಗೆ ಕಾಣುತ್ತಿದ್ದರೂ. ಅದರ ನಿಷೇಧಕ್ಕೆ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಶ್ರೀಧರ ಗೌಡರು, ಸರಕಾರವನ್ನು ಎಚ್ಚರಿಸಲು ಬೆಂಗಳೂರಿನ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗು ವುದು ಎಂದು ತಿಳಿಸಿದ್ದಾರೆ.

Advertisements
Posted in: Local News