ಉರ್ಲಾಂಡಿಯ ದಲಿತ ವ್ಯಕ್ತಿ ಸಾವು: ಕೊಲೆ ಶಂಕೆ

Posted on May 12, 2011

0


ಪುತ್ತೂರು: ಎರಡು ತಿಂಗಳ ಹಿಂದೆ ಪುತ್ತೂರಿನ ಉರ್ಲಾಂಡಿ ಎಂಬಲ್ಲಿ ನಡೆದಿದ್ದ ದಲಿತ ವ್ಯಕ್ತಿಯೊಬ್ಬರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು, ಇದೊಂದು ಕೊಲೆ ಪ್ರಕರಣವೆಂದು ಆರೋಪಿಸಿ ಮತ್ತು ತನಿಖೆಗೆ ಆಗ್ರಹಿಸಿ ಇದೀಗ ಮೃತರ ಪತ್ನಿ ಪೊಲೀಸ್ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ,

ಪುತ್ತೂರಿನ ಉರ್ಲಾಂಡಿ ನಿವಾಸಿಯಾಗಿದ್ದ ರಾಜು(೩೨ ) ಎಂಬವರ ಶವ ಕಳೆದ ಮಾರ್ಚ್ ೨೦ರಂದು ಬೆಳಿಗ್ಗೆ ಮನೆಯ ಪಕ್ಕದಲ್ಲಿ ಮರವೊಂದರ ಬುಡಕ್ಕೆ ನೇಣು ಬಿಗಿದ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ವೇಳೆ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಆತನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪುತ್ತೂರು ನಗರ ಠಾಣಾ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ರಾಜು ಅವರ ಪತ್ನಿ ಗಿರಿಜಾ ಎಂಬವರು ಪತಿಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ಪತಿಯ ಸಾವು ಆತ್ಮಹತ್ಯೆಯಲ್ಲ, ಇದೊಂದು ಕೊಲೆ ಕೃತ್ಯವೆಂದು ಶಂಕಿಸಿ ಇದೀಗ ಪೊಲೀಸ್ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಮಾರ್ಚ್ ೧೯ರಂದು ರಾತ್ರಿ ೧೧ ಗಂಟೆ ತನಕ ಮನೆಯ ಪಕ್ಕದಲ್ಲಿರುವ ದೇವರ ಕಟ್ಟೆಯ ಬಳಿ ಪಕ್ಕದ ಮನೆಯವರಾದ ವಸಂತ ಮತ್ತು ಸೀನಾ ಎಂಬವರ ಜೊತೆ ಮಾತನಾಡುತ್ತಿದ್ದ ರಾಜು ಅವರು ಬಳಿಕ ತೆಂಕಿಲದಲ್ಲಿ ನಡೆಯುತ್ತಿದ್ದ ಮುಗೇರ ನೇಮಕ್ಕೆ ಹೋಗಿದ್ದರು ಎಂದು ನಾವು ಭಾವಿಸಿದ್ದೆವು. ಮೂರನೇ ಪುಟಕ್ಕೆ

Advertisements
Posted in: Local News