‘ಪ್ರೀತಿ’ಗೆ ಸೋತ ಅಂಬಾನಿ ಹುಡುಗರು

Posted on May 11, 2011

0


ಮೊಹಾಲಿ: ಬಲಿಷ್ಠ ಬ್ಯಾಟಿಂಗ್ ಬಲ ಹೊಂದಿದ್ದ ಮುಂಬೈ ಇಂಡಿ ಯನ್ಸ್‌ಗೆ ಮಾರಕವಾಗಿ ಪರಿಣಮಿಸಿದ ಭಾರ್ಗವ್ ಭಟ್ ಹಾಗೂ ಪ್ರವೀಣ್ ಕುಮಾರ್ ನಡೆಸಿದ ಜುಗಲ್‌ಬಂಧಿ ದಾಳಿ ನೆರವಿನಿಂದ ಪಂಜಾಬ್ ಕಿಂಗ್ಸ್‌ಗೆ ೭೬ ರನ್‌ಗಳ ಜಯ ತಂದು ಕೊಟ್ಟರು.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಂಜಾಬ್ ನಿಗದಿತ ೨೦ ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ೧೬೩ ರನ್ ಪೇರಿಸಿತು. ಗುರಿ ಬೆನ್ನತ್ತಿದ್ದ ಮುಂಬೈ ಟೂರ್ನಿ ಯಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಕೇವಲ ೧೨.೫ ಓವರ್‌ಗಳಲ್ಲಿ ೮೭ ರನ್‌ಗೆ ಸರ್ವಪತನ ಹೊಂದುವ ಮೂಲಕ ಹೀನಾಯವಾಗಿ ಸೋಲನ್ನ ನುಭವಿಸಿತು. ಮುಂಬೈ ಅತ್ಯಂತ ಕಳಪೆ ಆರಂಭವನ್ನೇ ಪಡೆದಿತ್ತು. ಸಚಿನ್ ತೆಂಡುಲ್ಕರ್ (೬) ವಿಕೆಟ್ ಪಡೆಯುವ ಮೂಲಕ ಮುಂಬೈ ತಂಡ ಪ್ರಥಮ ಆಘಾತವನ್ನು ಪಡೆಯಿತು.

ಭಡ್ತಿ ಪಡೆದು ಆಡಿದ ಶರ್ಮಾ (೫) ಕೂಡ ಅಗ್ಗಕ್ಕೆ ತನ್ನ ವಿಕೆಟ್ ಕಳೆದುಕೊಂಡಾಗ ತಂಡಕ್ಕೆ ಮತ್ತೆ ಆಘಾತ. ಆದರೆ ಮುಂದಿನ ೨೭ ರನ್‌ಗಳ ಅಂತರದಲ್ಲಿ ಬ್ಲಿಝಾರ್ಡ್ (೧೫), ಸೈಮಂಡ್ (೮), ಹಾಗೂ ಅಂಬಾಟಿ (೧೩) ಮುಂತಾದ ಪ್ರಮುಖ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ತಂಡ ಮರ್ಮಾಘಾತಕ್ಕೆ ಒಳಗಾಯಿತು. ಮಧ್ಯಮ ಕ್ರಮಾಂಕ ದಲ್ಲಿ ಸುಮನ್ (೪) ಹಾಗೂ ಪೊಲಾರ್ಡ್ (೧೭) ಕೂಡ ತಂಡದ ನೆರವಿಗೆ ಧಾವಿಸದೇ ಇದ್ದದ್ದು ಮುಂಬೈ ಸೋಲಿಗೆ ಪ್ರಮುಖವಾಯಿತು. ಭಾರ್ಗವ್ ನಾಲ್ಕು ವಿಕೆಟ್ ಹಾಗೂ ಪ್ರವೀಣ್ ಎರಡು ವಿಕೆಟ್ ಪಡೆದು ಪಂಜಾಬ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಮೊದಲು ಬ್ಯಾಟಿಂಗ್ ನಡೆಸಿದ್ದ ಪಂಜಾಬ್ ಆರಂಭಿಕ ವಲ್ಥಟಿ (೧೪) ವಿಕೆಟ್ ಅನ್ನು ಬೇಗನೇ ಕಳೆದು ಕೊಂಡರೂ ನಂತರ ಗಿಲ್‌ಕ್ರಿಸ್ (೨೮) ಹಾಗೂ ಮಾರ್ಶ್ ಎರಡನೇ ವಿಕೆಟ್‌ಗೆ ಕೇವಲ ಏಳು ಓವರ್‌ಗಳಲ್ಲಿ ೭೦ ರನ್ ಪೇರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮಾರ್ಶ್ ನಂತರ ಆಗಮಿಸಿದ ಕಾರ್ತಿಕ್ ಜೊತೆ ಕೂಡ ೩೬ ರನ್‌ಗಳ ಜೊತೆಯಾಟ ನಡೆಸಿ ಮಧ್ಯಮ ಕ್ರಮಾಂಕದಲ್ಲಿ ನೆರವಾದರು. ಈ ವೇಳೆ ೩೪ ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ ೪೩ ರನ್ ಗಳಿಸಿದ್ದ ಮಾರ್ಶ್ ನಿರ್ಗಮಿಸಿದರು. ಕಾರ್ತಿಕ್ ಕೂಡ ವೇಗದ ೩೧ ರನ್ ದಾಖಲಿಸಿದರು. ಆದರೆ ಹಸ್ಸಿ (೦) ಹಾಗೂ ಮನ್‌ದೀಪ್ (೮) ಬ್ಯಾಟಿಂಗ್ ನಲ್ಲಿ ವಿಫಲಗೊಂಡರು.

ಮಾರಕ ಬೌಲಿಂಗ್ ದಾಳಿ ಸಂಘಟಿಸಿದ್ದ ಮುನಾಫ್ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದರು.

Posted in: Special Report