ಬಾರ್ಸೆಲೋನಾ ಫೆವರೀಟ್: ಯುನೈಟೆಡ್ ಕಪ್ತಾನ

Posted on May 11, 2011

0


ಬೆಲ್‌ಗ್ರೆಡ್: ಬಾರ್ಸೆಲೋನಾ ವಿರುದ್ಧ ನಡೆಯಲಿರುವ ಚಾಂಪಿಯನ್ಸ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡವೇ ಫೆವರೀಟ್ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಕಪ್ತಾನ ನೆಮಾಂಜ ವಿನಿಚ್ ಅಭಿಪ್ರಾಯ ಪಟ್ಟಿದ್ದಾರೆ. ಮೇ ೨೮ರಂದು ವೆಂಬ್ಲೆ ಯಲ್ಲಿ ಚಾಂಪಿಯನ್ ಲೀಗ್‌ನ ಫೈನಲ್ ಪಂದ್ಯ ನಡೆಯಲಿದೆ.

ಈ ಬಗ್ಗೆ ಯಾವ ಅನುಮಾನವೂ ಇಲ್ಲ. ಬಾರ್ಸೆಲೋನಾ ತನ್ನ ಹಿಂದಿನ ಆಟದ ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವಾದರೂ ಬಲಿಷ್ಟ ಆಟಗಾರರನ್ನು ಹೊಂದಿರುವ ಅವರೇ ಪಂದ್ಯದ ಫೆವರೀಟ್ ಎಂದು ವಿನಿಚ್ ತಿಳಿಸಿದ್ದಾರೆ. ೨೦೦೯ರಲ್ಲಿ ನಡೆದ ಫೈನಲ್ ನಲ್ಲಿ ಬಾರ್ಸೆಲೋನಾ ವಿರುದ್ಧ ಯುನೈ ಟೆಡ್ ಸೋಲನ್ನನುಭವಿಸಿತ್ತು.

ಇನ್ನು ಆದಿತ್ಯವಾರ ಚೆಲ್ಸಿ ವಿರುದ್ಧ ನಡೆದ ಪಂದ್ಯದಲ್ಲಿ ಯುನೈಟೆಡ್ ೨-೧ರಿಂದ ಜಯಿಸಿ ಇಂಗ್ಲಿಷ್ ಪ್ರಿಮಿಯರ್ ಲೀಗ್‌ನಲ್ಲಿಯೂ ಫೈನಲ್‌ಗೆ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ಬಾಕಿಯುಳಿದ ಎರಡು ಪಂದ್ಯಗಳಿಂದ ಒಂದು ಅಂಕ ಗಳಿಸಿದರೆ ಯುನೈಟೆಡ್ ತನ್ನ ದಾಖಲೆಯ ೧೯ನೇ ಪ್ರಿಮಿಯರ್ ಲೀಗ್ ಪ್ರಶಸ್ತಿಯನ್ನು ಪಡೆಯಲಿದೆ.

Posted in: Sports News