ಜೀಪ್ ಡಿಕ್ಕಿ: ಮಹಿಳೆ ಮೃತ್ಯು

Posted on May 11, 2011

0


ಕಾರ್ಕಳ: ಅಜೆಕಾರು ಸಮೀಪದ ಅಂಡಾರು ಎಂಬಲ್ಲಿ ಜೀಪ್ ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಚಾರಿ ಮಹಿಳೆಯೊಬ್ಬರು ದಾರುಣ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಅಂಡಾರಿನ ಚಂದ್ರ ನಾಯಕ್ ಎಂಬವರ ಪತ್ನಿ ಸರೋಜಿನಿ ನಾಯಕ್ (೬೫) ಎಂಬವರು ಘಟನೆಯಲ್ಲಿ ಜೀವತೆತ್ತ ಮಹಿಳೆಯಾಗಿದ್ದಾರೆ. ಇವರು ನಿನ್ನೆ ಬೆಳಿಗ್ಗೆ ಸುಮಾರು ೭.೩೦ರ ವೇಳೆಗೆ ಮತ್ತಾವು ಎಂಬಲ್ಲಿರುವ ತವರು ಮನೆಗೆ ಹೋಗುತ್ತಿದ್ದಾಗ ಜೀಪ್ ಡಿಕ್ಕಿ ಹೊಡೆದಿತ್ತು. ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದ ಅವರನ್ನು ಆರೋಗ್ಯ ರಕ್ಷಾ ಕವಚ ೧೦೮ ಆಂಬುಲೆನ್ಸ್‌ನ ಸಿಬ್ಬಂದಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊ ಯ್ಯುತ್ತಿರುವ ದಾರಿ ಮಧ್ಯೆ ಮೃತಪಟ್ಟಿ ದ್ದಾರೆಂದು ತಿಳಿದುಬಂದಿದೆ.

ಮುನಿಯಾಲು ಸಮೀಪದಲ್ಲಿರುವ ಗೇರುಬೀಜ ಫ್ಯಾಕ್ಟರಿಗೆ ಅಧೀನದಲ್ಲಿರುವ ಜೀಪನ್ನು ವಿಶ್ವನಾಥ ಎಂಬಾತ ಅತೀ ನಿರ್ಲಕ್ಷ್ಯ ಹಾಗೂ ಅತೀ ವೇಗವಾಗಿ ಚಲಾಯಿಸಿರುವುದು ಘಟನೆಗೆ ಕಾರಣ ವೆಂದು ತಿಳಿದುಬಂದಿದೆ. ಅಂಡಾರು, ಶಿರ್ಲಾಲು ಕಡೆಯಿಂದ ಕಾರ್ಮಿಕರನ್ನು ಗೇರುಬೀಜ ಫ್ಯಾಕ್ಟರಿಗೆ ಜೀಪಿನಲ್ಲಿ ಸಾಗಿಸಲಾಗುತ್ತಿತ್ತೆಂದು ತಿಳಿದುಬಂದಿದೆ.

Posted in: Crime News