ಕಳ್ಳತನ: ಮನೆಕೆಲಸದಾಕೆಯ ಸೆರೆ

Posted on May 11, 2011

0


ಮಂಗಳೂರು: ಕೋಡಿಯಾಲ್ ಗುತ್ತಿನ ಮನೆಯೊಂದರಿಂದ ಲಕ್ಷಾಂತರ ರೂ. ಮೊತ್ತದ ಚಿನ್ನಾಭರಣ ಕಳವುಗೈದಿದ್ದ ಮನೆಕೆಲಸದಾಕೆಯನ್ನು ಬರ್ಕೆ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ.

ಕೋಡಿಯಾಲ್‌ಗುತ್ತಿನ ಮಾಧವ ರಾಯ್ ಪೈ ಎಂಬವರ ತಾಯಿ ಶ್ರೀಮತಿ ಪೈಯವರ ಆರೈಕೆ ಮಾಡಲು ಬಂದಿದ್ದ ಮಮತಾ ಎಂಬಾಕೆ ಚಿನ್ನ, ವಜ್ರ, ಬೆಳ್ಳಿ ಮತ್ತು ಪ್ಲಾಟಿನಂ ಸಹಿತ ಆರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಐದು ಸಾವಿರ ರೂ. ನಗದು ದೋಚಿ ಮೇ ೪ರಂದು ಪರಾರಿಯಾಗಿದ್ದಳು.

ಮಾಧವ ರಾಯ್ ಪೈಯವರು ನೀಡಿದ ದೂರಿನಂತೆ ತನಿಖೆ ಆರಂಭಿ ಸಿದ ಬರ್ಕೆ ಪೊಲೀಸರು ಶಿವಮೊಗ್ಗದ ಜಿಎಚ್ ರಸ್ತೆಯಲ್ಲಿರುವ ಗಣೀಶ್ ಲಾಡ್ಜ್‌ನಿಂದ ಮಮತಾಳನ್ನು ಬಂಧಿಸಿ ದ್ದಾರೆ.

ಆರೋಪಿತೆಯ ಬಳಿಯಲ್ಲಿದ್ದ ಚಿನ್ನಾಭರಣ, ೧೦,೫೨೮ ರೂ. ನಗದು ಮತ್ತು ಆಕೆಯ ಬಳಿಯಲ್ಲಿದ್ದ ಮೊಬೈಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಬರ್ಕೆ ಅಪರಾಧ ಪತ್ತೆ ವಿಭಾಗದ ಪಿಎಸ್‌ಐ ಪೂವಪ್ಪ, ಸಿಬ್ಬಂದಿ ಸಂತೋಷ್ ಸಸಿಹಿತ್ಲು, ಪ್ರದೀಪ್ ಕುಮಾರ್ ರೈ ಶಿವಮೊಗ್ಗದ ಪೊಲೀಸರ ನೆರವಿನಿಂದ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

Posted in: Local News