ಉಪ್ಪಿನಂಗಡಿ: ಮುಸ್ಲಿಯಾರ್ಗೆ ವಂಚನೆ

Posted on May 11, 2011

0


ಉಪ್ಪಿನಂಗಡಿ: ವಿದೇಶದಲ್ಲಿ ವೀಸಾ ಕೊಡಿಸುವುದಾಗಿ ಹೇಳಿ ಪುತ್ತೂರಿನ ಆರ್ಯಾಪು ಗ್ರಾಮದ ಮುಸ್ಲಿಯಾರ್ ಓರ್ವರಿಗೆ ವಂಚಿಸಿ, ಕೊಲೆ ಬೆದರಿಕೆಯೊಡ್ಡಿದ ಬಗ್ಗೆ ಮುಸ್ಲಿಯಾರ್ ನೀಡಿರುವ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈನಾ ಸೆಂಟರ್‌ನ ಅಶ್ರಫ್ ಎಂಬಾತ ಪುತ್ತೂರು ಆರ್ಯಾಪು ಗ್ರಾಮದ ಕುಂಡಡ್ಕ ನಿವಾಸಿ ಹಮೀದ್ ಯಾನೆ ಮೊಯ್ದೀನ್ ಮುಸ್ಲಿಯಾರ್ ಎಂಬವರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು ರೂ. ೯೭ ಸಾವಿರ ವಂಚಿಸಿದ್ದಾನೆ ಎಂದು ದೂರು ನೀಡಲಾಗಿದೆ. ಅಲ್ಲದೆ ತಾನು ನೀಡಿದ್ದ ಹಣ ಹಿಂದಕ್ಕೆ ನೀಡುವಂತೆ ಅಶ್ರಫ್‌ನಲ್ಲಿ ಕೇಳಿದಾಗ ಆತ ತನ್ನ ಮನೆಗೆ ಬೆಂಕಿ ಹಚ್ಚಿ ಕುಟುಂಬ ಸಮೇತ ಎಲ್ಲರನ್ನೂ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿರು ವುದಾಗಿ’ ಮೊಯ್ದೀನ್ ಮುಸ್ಲಿಯಾರ್ ದೂರಿ ನಲ್ಲಿ ತಿಳಿಸಿದ್ದಾರೆ.

ಮೊಯ್ದಿನ್ ಮುಸ್ಲಿಯಾರ್ ಈ ಬಗ್ಗೆ ಎಎಸ್ಪಿಯವರಿಗೆ ದೂರು ನೀಡಿದ್ದು, ಅವರ ಆದೇಶದಂತೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

Posted in: Special Report