ಸೈಕ್ಲಿಂಗ್ ಅಪಘಾತದಲ್ಲಿ ಸಾವಿಗೀಡಾದ ವೂಟರ್

Posted on May 11, 2011

0


ರಪೆಲ್ಲೊ (ಇಟಲಿ): ಸೋಮವಾರ ವಿಶ್ವ ಸೈಕ್ಲಿಂಗ್‌ಗೆ ಕರಾಳ ದಿನವಾಗಿತ್ತು. ಇಲ್ಲಿ ನಡೆಯುತ್ತಿರುವ ಮೂರನೇ ಹಂತದ ಗಿರೊ ಡಿ‘ಇಟಾಲಿಯಾ ಸೈಕ್ಲಿಂಗ್ ಸ್ಪರ್ಧೆಯ ಸಂದರ್ಭ ಬೆಲ್ಜಿಯಂನ ಪ್ರಸಿದ್ದ ರೈಡರ್ ವೂಟರ್ ವೇಲ್ಯಾಂಡ್ ಸ್ಪರ್ಧೆಯ ವೇಳೆಯೇ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಉತ್ತರ ಇಟಲಿಯಲ್ಲಿ ನಡೆಯು ತ್ತಿದ್ದ ಸ್ಪರ್ಧೆಯ ಸಂದರ್ಭ ೨೬ರ ಹರೆಯದ ವೂಟರ್‌ರ ಸೈಕಲ್ ರಸ್ತೆಗೆ ಅಪ್ಪಳಿಸಿದ ಪರಿಣಾಮ ತೀವ್ರ ರಕ್ತ ಸ್ರಾವಕ್ಕೆ ಒಳಗಾಗಿದ್ದು ಬೆನ್ನುಹುರಿಯು ಭೀಕರವಾಗಿ ಜಖಂಗೊಂಡಿದೆ. ಆದರೆ ಸ್ಥಳದಲ್ಲಿದ್ದ ಪ್ರಥಮ ಚಿಕಿತ್ಸಾಗಾರರು ಮತಿತಪ್ಪಿದ ಸ್ಥಿತಿಯಲ್ಲಿದ್ದ ವೂಟರ್‌ರ ಹೆಲ್ಮೆಟ್ ಅನ್ನು ತಕ್ಷಣವೇ ತೆಗೆದು ಕೆಲವು ಚಿಕಿತ್ಸೆಗಳನ್ನು ನೀಡಿ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ನಾವು ವೂಟರ್‌ಗೆ ತಕ್ಷಣವೇ ಚಿಕಿತ್ಸೆ ಯನ್ನು ನೀಡಿದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆ ವೈದ್ಯರು ವಿಷಾದ ವ್ಯಕ್ತಪ ಡಿಸಿದ್ದಾರೆ. ಸ್ಪರ್ಧೆಯ ಸಂದರ್ಭ ನಮ್ಮ ಸಹ ಆಟಗಾರ ಹಾಗೂ ಉತ್ತಮ ಸ್ನೇಹಿತ ಕೂಡ ಆಗಿರುವ ವೂಟರ್ ನಿಧನ ಹೊಂದಿದ್ದಾರೆ ಎಂದು ಲಿಯೊಪಾಡ್-ಟ್ರೆಕ್ ನಿರ್ದೇಶಕ ಬ್ರ್ಯಾನ್ ನೈಗಾರ್ಡ್ ತನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisements
Posted in: Special Report