ಮದುವೆ ಮನೆಯಲ್ಲಿ ಕೊಲೆ

Posted on May 11, 2011

0


ಬಂಟ್ವಾಳ: ಸಂಬಂಧಿಕರ ಮದುವೆ ಮನೆಯಲ್ಲಿ ನಡೆದ ಜಗಳವನ್ನು ಬಿಡಿಸಲು ಹೋದ ವ್ಯಕ್ತಿಯೊಬ್ಬರನ್ನು ತಂಡವೊಂದು ಮಾರಕವಾಗಿ ಹಲ್ಲೆ ನಡೆಸಿ ಕೊಲೆಗೈದ ಘಟನೆ ನಿನ್ನೆ ರಾತ್ರಿ ಇಲ್ಲಿನ ಲೊರೆಟ್ಟೊ ಪದವಿನ ಟಿಪ್ಪುನಗರದಲ್ಲಿ ನಡೆದಿದೆ.

ಪಾಣಿ ಮಂಗಳೂರಿನ ನೆಹರೂ ನಗರ ನಿವಾಸಿ ಅಬ್ದುಲ್ ಖಾದರ್(೪೨) ಎಂಬವರೇ ಕೊಲೆಗೀಡಾದವರು. ಇವರ ಸೋದರಿಯ ಮಗಳ ಗಂಡನ ಮನೆಯಲ್ಲಿ ಮದುವೆ ಕಾರ‍್ಯಕ್ರಮ ನಡೆಯುತ್ತಿದ್ದು, ಈ ವೇಳೆ ಇತ್ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದು, ಇದು ಮಾರಾಮಾರಿ ಹಂತಕ್ಕೆ ತಲುಪಿತ್ತು. ಇದನ್ನು ಬಿಡಿಸಲು ಹೋದ ಖಾದರ್ ಮೇಲೆ ಹಲ್ಲೆ ನಡೆದು ಅವರು ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟರು ಎಂದು ತಿಳಿದುಬಂದಿದೆ.

ಘಟನೆ ವಿವರ: ರಿಯಾಜ್ ಎನ್ನುವಾತ ಟಿಪ್ಪುನಗರದಲ್ಲಿರುವ ಆತನ ಅತ್ತೆ ಮನೆಗೆ ಮದುವೆಗೆ ಬಂದಿದ್ದು ಅಲ್ಲಿ ಆತನನ್ನು ಮೊಹಮ್ಮದ್ ರಿಯಾಜ್, ಸಲ್ಮಾನ್ ಫಾರೂಕ್, ಅನ್ಸಾರ್ ಮತ್ತು ಮನ್ಸೂರು, ಆಶಿಕ್ ಎಂಬವರು ನೀನು ಇಲ್ಲಿಗೆ ಯಾಕೆ ಬಂದೆ ಎಂದು ಪ್ರಶ್ನಿಸಿದಲ್ಲದೆ, ನೀನು ದೊಡ್ಡ ಜನವಾ ಎಂದು ಹೀಯಾಳಿಸಿ ನೀನು ಯಾವಾಗ ಹೋಗುತ್ತೀ? ಎಂದು ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದೆ. ರಿಯಾಜ್ ಇದನ್ನು ಮದುವೆ ಮನೆಯವರಾದ ನಜೀರ್ ಮತ್ತು ಸಫಾನ್‌ಗೆ ತಿಳಿಸಿದ್ದು, ಈ ವೇಳೆ ರಿಯಾಜ್ ಮತ್ತು ಮೊಹಮ್ಮದ್ ರಿಯಾಜ್ ಮಧ್ಯೆ ಜಗಳ ಆರಂಭವಾಯಿತು. ರಿಯಾಜ್‌ಗೆ ಮೊಹಮ್ಮದ್ ರಿಯಾಜ್ ಹೊಡೆಯಲು ಬಂದು ಕಾಲಿನಿಂದ ಒದ್ದ ಎನ್ನಲಾಗಿದೆ. ಮೂರನೇ ಪುಟಕ್ಕೆ

Advertisements
Posted in: Crime News