ಪ್ರೆಶರ್ ಕುಕ್ಕರ್ನೊಳಗೆ ಬಾಲಕನ ತಲೆ!

Posted on May 11, 2011

0


ನವದೆಹಲಿ: ಪ್ರೆಶರ್ ಕುಕ್ಕರ್‌ನೊಳಗೆ ತಲೆ ಸಿಲುಕಿಕೊಂಡು ಒದ್ದಾಡುತ್ತಿದ್ದ ಸಣ್ಣ ಬಾಲಕನೊಬ್ಬನನ್ನು ವೈದ್ಯರು ಎರಡು ಗಂಟೆಗಳ ರಕ್ಷಣಾ ಕಾರ‍್ಯಾಚರಣೆ ಬಳಿಕ ಹೊರತೆಗೆದ ಘಟನೆ ನಡೆದಿದೆ.

ಮಕ್ಕಳು ಅಡುಗೆ ಕೋಣೆಗೆ ಹೋಗು ವುದೇ ತುಂಬಾ ಅಪರೂಪ. ಆದರೆ ದೆಹಲಿ ಯ ರಾಣಿಭಾಗ್‌ನಲ್ಲಿರುವ ಮನೆಯೊಂದರಲ್ಲಿ ಮೂರರ ಹರೆಯದ ಶಿವಂ ಎನ್ನುವ ಬಾಲಕ ಪ್ರೆಶರ್ ಕುಕ್ಕರ್‌ನಲ್ಲಿ ಆಡುತ್ತಿದ್ದಾಗ ತಲೆ ಅದರೊಳಗೆ ಸಿಲುಕಿಹಾಕಿಕೊಂಡಿತ್ತು. ಕೂಡಲೇ ಬಾಲಕನ ತಂದೆ ಸಂಜಯ್ ಆಸ್ಪತ್ರೆಗೆ ಕೊಂಡೊಯ್ದರು.

Advertisements