ಪ್ರೀತಿಸಿದ ಹುಡುಗನನ್ನು ದೂರ ಮಾಡಿದವರ ವಿರುದ್ಧ ಯುವತಿಯ ದೂರು

Posted on May 11, 2011

0


ಬೈಂದೂರು: ಪ್ರೀತಿಸಿದ ಹುಡುಗನನ್ನು ದೂರ ಮಾಡಿದ ಹುಡುಗನ ಕಡೆಯವರಿಂದ ತನಗೆ ಅನ್ಯಾಯವಾಗಿದೆಯೆಂದು ಪ್ರಿಯತಮೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಘಟನೆ ವರದಿಯಾಗಿದೆ.

ಕುಂದೇಶ್ವರ ನಿವಾಸಿ ಪ್ರಶಾಂತ್ ಕೋತ್ವಾಲ್ ಎಂಬಾತನಿಗೆ ತನ್ನ ನೆರೆಮನೆಯ ದೇವಾಡಿಗ ಸಮುದಾಯದ ಯುವತಿಯೊಂ ದಿಗೆ ಪ್ರೇಮಾಂಕುರವಾಗಿತ್ತು. ಯುವತಿ ಮುಂಬೈಯಲ್ಲಿ ನೆಲೆಸಿದ್ದು ಆಗಾಗ ಕುಂದಾಪುರದ ಅಜ್ಜಿಮನೆಗೆಂದು ಬರುತ್ತಿದ್ದಳು. ಇದೇ ಸಂದರ್ಭದಲ್ಲಿ ಪ್ರಶಾಂತ ಆಕೆಯ ಪ್ರೀತಿಯಲ್ಲಿ ಬಿದ್ದಿದ್ದ.

ಒಂದುವರೆ ವರ್ಷದ ಹಿಂದೆ ಇವರಿಬ್ಬರ ಪ್ರೀತಿಯ ವಿಷಯ ಪ್ರಶಾಂತನ ಮನೆಯಲ್ಲಿ ಗೊತ್ತಾದಾಗ ಪ್ರೇಮಿಗಳನ್ನು ಬೇರ್ಪಡಿಸಲು ಪ್ರಯತ್ನ ನಡೆಯಿತು. ಒಂದು ಹಂತದಲ್ಲಿ ಯುವತಿಯನ್ನು ಶಾಶ್ವತವಾಗಿ ಮುಂಬೈಯಲ್ಲಿ ನೆಲೆಸುವಂತೆ ಮಾಡಿದ ಹೆತ್ತವರು ಪ್ರಶಾಂತ ನಿಗೆ ಬೇರೆ ಕಡೆ ಹುಡುಗಿಯನ್ನು ನೋಡಿ ಮದುವೆ ಮಾಡುವ ಯತ್ನವನ್ನೂ ಮಾಡಿದರು. ಈ ನಡುವೆ ಮುಂಬೈಯಲ್ಲಿರುವ ಯುವತಿಯ ಸಂಪರ್ಕಿಸಿದ ಪ್ರಶಾಂತ ಮತ್ತೆ ಆಕೆಯ ಜೊತೆ ಪ್ರೀತಿಯ ಸಂಬಂಧ ಮುಂದುವರಿಸಿದ್ದ. ಈ ನಡುವೆ ಇಬ್ಬರೂ ಮುಂಬೈಯಲ್ಲಿ ಮದುವೆಯಾಗುವ ನಿರ್ಧಾರ ಮಾಡಿದರು. ಪ್ರಶಾಂತ ಒಂದು ದಿನ ಊರಿ ನಿಂದ ಏಕಾಏಕ ಕಾಣೆಯಾಗಿದ್ದ. ವಾಶಿಯಲ್ಲಿ ದೇವಾಲಯವೊಂದರಲ್ಲಿ ಮದುವೆಯಾದ ದಂಪತಿಗಳು ಮುಂಬೈಯಲ್ಲೇ ನೆಲೆಸಿದರು.

ಈ ಹಂತದಲ್ಲಿ ರಂಗ ಪ್ರವೇಶ ಮಾಡಿದ ಪ್ರಶಾಂತನ ಮಾವಂದಿರು ಬೇಗ ಊರಿಗೆ ಬಾ, ಇಲ್ಲಿ ನಿನ್ನ ತಾಯಿಗೆ ಹುಷಾರಿಲ್ಲ, ನಿನ್ನ ಪತ್ನಿಯೊಂದಿಗೆ ಊರಲ್ಲೇ ನೆಲೆಸು ಎಂಬ ಸಂದೇಶ ರವಾನಿಸಿ ಪ್ರಶಾಂತನನ್ನು ಕುಂದಾಪುರಕ್ಕೆ ಮೂರನೇ ಪುಟಕ್ಕೆ

Advertisements
Posted in: Special Report