ಪ್ರತಿಭಟನೆಗೆ ಅನುಮತಿ ಪಡೆಯುವುದರಲ್ಲೂ ಕಾಂಗ್ರ ೆಸ್ ಲೇಟ್!

Posted on May 11, 2011

0


ಮಂಗಳೂರು: ಬಿ.ಜೆ.ಪಿ. ನೇತೃತ್ವದ ನಗರಪಾಲಿಕೆ ದುರಾಡಳಿತದ ವಿರುದ್ಧ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಅನುಮತಿ ಪಡೆಯಲು ಮುಖಂಡರು ತಡವಾಗಿ ಹೋದ ಕಾರಣ ಅನುಮತಿ ದೊರೆಯದೆ ಪ್ರತಿಭಟನೆಯನ್ನು ಮುಂದೂಡುವ ನಿರ್ಧಾರ ಕೈಗೊಂಡಿದೆ.

ಪಾಲಿಕೆಯಲ್ಲಿ ಬಿ.ಜೆ.ಪಿ. ಆಡಳಿತಕ್ಕೆ ಬಂದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಸ್ವಯಂಘೋಷಿತ ಆಸ್ತಿ ತೆರಿಗೆ ಯನ್ನು ಏರಿಸಲಾಗಿದೆ. ಅಲ್ಲದೆ ಘನ ತ್ಯಾಜ್ಯ ವಿಲೇವಾರಿಯ ಹೆಸರಿನಲ್ಲಿಯೂ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುವ ಪ್ರಕ್ರಿಯೆ ಆರಂಭ ಗೊಂಡಿದೆ. ಇದೆಲ್ಲವನ್ನೂ ಪಾಲಿಕೆಯ ಸಭೆಯಲ್ಲಿ ಪ್ರಶ್ನಿಸಿ ಸೋತಿರುವ ಕಾಂಗ್ರೆಸ್ ಈಗ ಬಹಿರಂಗವಾಗಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಇದಕ್ಕಾಗಿ ಕಳೆದ ತಿಂಗಳಿನಲ್ಲಿ ತೀರ್ಮಾನ ಕೈಗೊಂಡಿದ್ದ ಕಾಂಗ್ರೆಸ್ ಈ ತಿಂಗಳ ೧೨ರಂದು (ಸುಧೀರ್ಘ ಅವಧಿಯ ದಿನವನ್ನು) ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಗೆ ದಿನ ನಿಗದಿ ಗೊಳಿಸಿ ಕಟೌಟ್‌ಗಳ ಮೂಲಕ ಪ್ರಚಾರ ವನ್ನೂ ನಡೆಸಿತ್ತು. ಇದೆಲ್ಲವನ್ನೂ ಮಾಡಿದ್ದ ಕಾಂಗ್ರೆಸ್ ಮುಖಂಡರು ಅನುಮತಿಯನ್ನು ಮಾತ್ರ ಪಡೆದಿರಲೇ ಇಲ್ಲ. ಇನ್ನೇನು ಪ್ರತಿಭಟನೆಗೆ ದಿನ ಹತ್ತಿರ ಬರುತ್ತಿದೆ ಎಂದರಿತ ಮುಖಂಡರು ಪ್ರತಿಭಟನೆಗೆ ಅನುಮತಿ ಕೇಳಲು ಕಮೀಷನರ್ ಕಚೇರಿ ದೌಡಾಯಿಸಿದ್ದಾರೆ. ಆದರೆ ಅದಕ್ಕೂ ಮೊದಲು ಯಾವುದೋ ಒಂದು ಸಂಘಟನೆ ಕಾರ್ಯಕ್ರಮಕ್ಕೆ ಅನುಮತಿ ಪಡೆದಿದೆ ಎನ್ನುವ ಮಾಹಿತಿ ದೊರ ಕಿದ ಕಾರಣ ರಾಷ್ಟ್ರೀಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಮುಖಂಡರು ಮುಖಭಂಗ ಅನುಭವಿಸಿದ್ದಾರೆ. ಇನ್ನು ಬೇರೆ ದಾರಿಯಿಲ್ಲ ಎಂದರಿತ ಮುಖಂ ಡರು ಪ್ರತಿಭಟನೆಯನ್ನು ೧೬ನೇ ತಾರೀ ಕಿಗೆ ಮುಂದೂಡಿದ್ದು ಇದರ ಬಗ್ಗೆ ನಿನ್ನೆ ಸುದ್ದಿಗೋಷ್ಟಿ ನಡೆಸಿದ ಲ್ಯಾನ್ಸ್ ಲಾಟ್ ಪಿಂಟೋ ಮತ್ತು ವಿಜಯ ಕುಮಾರ್ ಶೆಟ್ಟಿ ಪ್ರತಿಭಟನೆಯ ಮೂಲ ಉದ್ದೇಶದ ಕರ ಪತ್ರವನ್ನೂ ಬಿಡುಗಡೆಗೊಳಿಸಿದ್ದಾರೆ.

Advertisements
Posted in: Special Report