ಟ್ಯಾಂಕರ್ ಪಲ್ಟಿ: ನಿಲ್ಲದ ಗ್ಯಾಸ್ ಸೋರಿಕೆ

Posted on May 11, 2011

0


ವಿಟ್ಲ: ಮಂಗಳೂರಿನಿಂದ ಬೆಂಗಳೂ ರಿಗೆ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಪೇರಮೊಗರು ಎಂಬಲ್ಲಿ ಪಲ್ಟಿ ಯಾಗಿ ಗ್ಯಾಸ್ ಸೋರಿಕೆಯಾಗಿದ್ದು, ನಿನ್ನೆ ತಡರಾತ್ರಿವರೆಗೆ ಗ್ಯಾಸ್ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ನಿನ್ನೆ ಮಧ್ಯಾಹ್ನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದ್ದು, ಚಾಲಕ ಸುಧಾಕರ್(೪೨) ಅಲ್ಪಸ್ವಲ್ಪ ಗಾಯದೊಂದಿಗೆ ಪಾರಾಗಿದ್ದಾನೆ. ಟ್ಯಾಂಕರ್ ಪಲ್ಟಿಯಾದ ಪರಿಣಾಮ ಗ್ಯಾಸ್ ಸೋರಿಕೆ ಯಾಗುತ್ತಿದ್ದು, ಆರು ಅಗ್ನಿಶಾಮಕ ವಾಹನ ಗಳು ಗ್ಯಾಸ್ ಸೋರಿಕೆ ತಡೆಗಟ್ಟಲು ಹರಸಾಹಸ ಮಾಡಿವೆ. ಸಂಜೆಯಾಗುತ್ತಲೇ ಮತ್ತಷ್ಟು ಅಗ್ನಿಶಾಮಕ ದಳದ ವಾಹನಗಳು ಗ್ಯಾಸ್ ಸೋರಿಕೆ ತಡೆಗಟ್ಟಲು ಪ್ರಯತ್ನಿಸಿ ದರೂ ಇದು ಯಶಸ್ವಿಯಾಗಿಲ್ಲ ಎನ್ನಲಾ ಗಿದೆ. ಸುಮಾರು ಒಂದು ಕಿ. ಮೀ. ತನಕ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Advertisements
Posted in: State News