ಕುರುಂಜಿ ಕಟ್ಟಿದ ಸಾಮ್ರಾಜ್ಯಕ್ಕೆ ಕೊಳ್ಳಿ ಇಟ್ ಟನೇ ಪುತ್ರರತ್ನ?

Posted on May 11, 2011

0


ಮಂಗಳೂರು: ದೊಡ್ಡ ಗ್ರಾಮ ಎಂದು ಹೇಳಬಹುದಾದ ಊರಿನ ಹೆಸರು ಸುಳ್ಯ. ದುರದೃಷ್ಟವಶಾತ್ ಇದು ತಾಲೂಕು ಕೇಂದ್ರ ಎನಿಸಿಕೊಳ್ಳುತ್ತದೆ. ಆದರೆ ಇಲ್ಲಿ ತಾಲೂಕು ಎನಿಸಲು ಬೇಕಾದ ಸೌಕರ್ಯ, ಇತರ ತಾಲೂಕು ಪ್ರದೇಶಗಳಲ್ಲಿ ಕಾಣಸಿಗುವ ಅನುಕೂಲ ಗಳಾವುದು ಕಾಣುವುದಿಲ್ಲ. ಈಗ ಹೀಗಿರುವ ಊರು ನಲವತ್ತು ವರ್ಷಗಳ ಹಿಂದೆ ಹೇಗಿದ್ದೀತು ಎಂದು ಅಂದಾಜಿಸಿ.

ಸರಿಸುಮಾರು ನಲವತ್ತು ವರ್ಷಗಳ ಹಿಂದೆ ಕುಗ್ರಾಮ ಎಂದು ಕರೆಸಿಕೊಳ್ಳಲು ಯೋಗ್ಯವಾಗಿದ್ದ ಸುಳ್ಯ ಎಂಬ ತಾಲೂಕು ಕೇಂದ್ರದಲ್ಲಿ ಶಿಕ್ಷಣ ಕ್ಷೇತ್ರದ ಕ್ರಾಂತಿಯನ್ನೇ ರೂಪಿಸಿದವರು ಕುರುಂಜಿ ವೆಂಕಟ್ರಮಣ ಗೌಡರು. ಸುಳ್ಯ ಎಂದರೆ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿ ಗುರುತಿಸಲ್ಪಡುವುದೇ ಕುರುಂಜಿಯವರ ಹೆಸರಿನಿಂದ. ಸುಳ್ಯಕ್ಕೆ ಪರ್ಯಾಯ ಎನಿಸಿದ ಕುರುಂಜಿ ಎಂಬ ನಾಮಕ್ಕೆ ಈಗ ಕಳಂಕ ಅಂಟಿದೆ. ನಲವತ್ತು ವರ್ಷಗಳ ಅಪ್ಪನ ಪರಿಶ್ರಮಕ್ಕೆ ರೇಣುಕಾಪ್ರಸಾದ್ ಎಂಬ ಪುತ್ರ ಕೊಳ್ಳಿ ಇಟ್ಟಿದ್ದಾನೆ. ಅವನು ಮಾಡಿದ ಒಂದು ತಪ್ಪು ಇಂದು ಸುಳ್ಯದ ಜನರಲ್ಲಿ ಅಭಿಮಾನ ಭಂಗ ಉಂಟುಮಾಡಿದೆ ಮೂರನೇ ಪುಟಕ್ಕೆ

Advertisements
Posted in: Local News