ಒಸಾಮಾ ಹತ್ಯೆಗೆ ಹತ್ತು ವರ್ಷಗಳ ಮೊದಲೇ ಒಪ್ಪಂದವ ಾಗಿತ್ತು!

Posted on May 11, 2011

0


ಲಂಡನ್: ಒಸಾಮಾ ಬಿನ್ ಲಾಡೆನ್ ಹತ್ಯೆಯನ್ನು ಪಾಕ್‌ಗೆ ತಿಳಿಯದಂತೆ ಅಮೆರಿಕಾ ಸೇನೆ ಮಾಡಿ ಮುಗಿಸಿದ್ದು ಹೇಗೆಂದು ಈಗಲೂ ಹಲವರಲ್ಲಿ ಕುತೂ ಹಲ ಇದ್ದೇ ಇದೆ. ಆದರೆ ಹತ್ತು ವರ್ಷಗಳ ಮೊದಲು ಮುಷರಫ್ ಮತ್ತು ಜಾರ್ಜ್ ಬುಷ್ ಮಾಡಿದ್ದ ಒಪ್ಪಂದವೇ ಈ ಎಲ್ಲಾ ಕಾರ‍್ಯಾಚರಣೆಗೆ ಕಾರಣವೆಂದು ತಿಳಿದು ಬಂದಿದೆ.

ಲಾಡೆನ್ ಏನಾದರೂ ಪಾಕ್‌ನಲ್ಲಿದ್ದರೆ ಆತನ ವಿರುದ್ಧ ಅಮೆರಿಕಾ ಏಕಪಕ್ಷೀಯ ವಾಗಿ ದಾಳಿ ನಡೆಸಲಿದೆ ಎನ್ನುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ೨೦೦೧ರಲ್ಲಿ ಆಗಿನ ಅಮೆರಿಕಾ ಅಧ್ಯಕ್ಷ ಬುಷ್ ಮತ್ತು ಮುಷಾರಫ್ ಮಧ್ಯೆ ಒಪ್ಪಂದ ನಡೆದಿತ್ತು. ಅಪಘಾನಿಸ್ತಾನದ ಟೋರಾಬೋರಾ ಬೆಟ್ಟದಿಂದ ಲಾಡೆನ್ ಪರಾರಿಯಾದ ಬಳಿಕ ಈ ಒಪ್ಪಂದ ನಡೆದಿತ್ತು ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ಒಪ್ಪಂದದ ಪ್ರಕಾರ ಪಾಕ್ ನೆಲದಲ್ಲಿ ಲಾಡೆನ್ ಹಾಗೂ ಆತನ ಸಹಾಯಕ ಐಮನ್ ಅಲ್ ಜವಾಹಿರಿ ವಿರುದ್ಧ ಏಕ ಪಕ್ಷೀಯವಾಗಿ ದಾಳಿ ನಡೆಸಲು ಅಮೆರಿಕಾ ಪಡೆಗಳಿಗೆ ಅನುಮತಿ ನೀಡುತ್ತದೆ. ಈ ಬಗ್ಗೆ ಪಾಕಿಸ್ತಾನ ಪ್ರತಿಭಟಿಸುತ್ತದೆ ಎಂದು ಒಪ್ಪಂದದಲ್ಲಿ ನಿರ್ಣಯಿಸಲಾಗಿತ್ತು. ಈ ಕುರಿತು ಪಾಕಿಸ್ತಾನ ಮತ್ತು ಅಮೆರಿಕಾದ ಹಾಲಿ ಹಾಗೂ ನಿವೃತ್ತ ಅಧಿಕಾರಿಗಳ ಹೇಳಿಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಮುಷರಫ್ ಅವಧಿಯಲ್ಲಿ ನಡೆದ ಒಪ್ಪಂದವು ೨೦೦೮ರಲ್ಲಿ ಪ್ರಜಾಸತ್ತಾತ್ಮಕ ಸರಕಾರ ಚುನಾಯಿತಗೊಂಡ ಸಂದರ್ಭದಲ್ಲಿ ನವೀಕರಣಗೊಂಡಿತು ಎಂಬುವುದನ್ನು ಖಚಿತಪಡಿಸಿದ್ದಾರೆ. ಅಮೆರಿಕಾ ಒಪ್ಪಂದ ದಂತೆ ನಡೆದುಕೊಂಡಿದೆ ಎಂದು ಪಾಕ್ ಅಧಿಕಾರಿ ಹೇಳಿದ್ದಾರೆ.

Advertisements