ಮ್ಯಾಡ್ರಿಡ್ ಮಾಸ್ಟರ್ಸ್ ಗೆದ್ದ ಜೊಕೊವಿಕ್

Posted on May 10, 2011

0


ಮ್ಯಾಡ್ರಿಡ್: ಇಲ್ಲಿ ನಡೆದ ಮ್ಯಾಡ್ರಿಡ್ ಮಾಸ್ಟರ‍್ಸ್ ಟೂರ್ನಿಯ ಫೈನಲ್‌ನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಸ್ಪೇಯ್ನ್‌ನ ರಫಾಯಲ್ ನಡಾಲ್ ವಿರುದ್ಧ ಸರ್ಬಿ ಯಾದ ನೊವಾಕ್ ಜೊಕೊವಿಕ್ ೭-೫, ೬-೪ರ ಅಂತರದಲ್ಲಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿದ್ದಾರೆ. ಈ ಮೂಲಕ ಜೊಕೊವಿಕ್ ವರ್ಷದ ಆರನೇ ಟೂರ್ನಿಯನ್ನು ಗೆದ್ದಿದ್ದಾರೆ. ಆವೆ ಮಣ್ಣಿನಲ್ಲಿ ಉತ್ತಮ ದಾಖಲೆ ಹೊಂದಿರುವ ಹಾಗೂ ಡಿಫೆಂಡಿಂಗ್ ಚಾಂಪಿಯನ್ ಕೂಡ ಆಗಿರುವ ನಡಾಲ್ ಪ್ರಶಸ್ತಿ ಗೆಲ್ಲುವ ಫೆವರೀಟ್ ಆಗಿದ್ದರು. ಆದರೆ ಉತ್ತಮ ಆಟ ಪ್ರದರ್ಶಿಸಿದ ಜೊಕೊವಿಕ್ ಪ್ರಶಸ್ತಿಗೆ ಮುತ್ತಿಟ್ಟರು.

Posted in: Sports News