ಕಾರ್-ಬೈಕ್ ಡಿಕ್ಕಿ: ಗಾಯ

Posted on May 10, 2011

0


ಕಾರ್ಕಳ: ಇಲ್ಲಿಗೆ ಸಮೀಪದ ಹಿರ್ಗಾನ ಎಂಬಲ್ಲಿ ಸಂಭವಿಸದ ರಸ್ತೆ ಅಪಘಾತವೊಂದರಲ್ಲಿ ಬೈಕೊಂದು ಸಂಪೂರ್ಣ ಹಾನಿಗೊಳಗಾದ ಘಟನೆ ಸಂಭವಿಸಿದೆ.

ರವಿವಾರ ಮಧ್ಯಾಹ್ನ ವೇಳೆಗೆ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಎದುರುಕಡೆಯಿಂದ ಬರುತ್ತಿದ್ದ ಬೈಕ್ ಹಿರ್ಗಾನದ ಕೃಷ್ಣ ಗೇರುಬೀಜ ಫ್ಯಾಕ್ಟರಿ ಮುಂಭಾಗದ ರಸ್ತೆಯಲ್ಲಿ ಪರಸ್ವರ ಡಿಕ್ಕಿ ಹೊಡೆದಿರುವುದು ಘಟನೆಗೆ ಕಾರಣವೆನ್ನಲಾಗಿದೆ. ಬೈಕ್ ಸವಾರ ಗಾಯಗೊಂಡಿದ್ದಾನೆ.

Posted in: Special Report