ಅಪಾಯಕಾರಿ ಕಲ್ಲಿನ ಲಾರಿಗಳು

Posted on May 10, 2011

0


ಕಿಗೋಳಿ, ಕಟೀಲು, ಮೂಡಬಿದ್ರಿ ಸಮೀಪ ಕೆಂಪು ಕಲ್ಲು ತೆಗೆಯುವ ಹತ್ತಾರು ಕೋರೆಗಳು ಕಾರ್ಯಾಚರಿಸುತ್ತಿವೆ. ಇಲ್ಲಿ ತಗೆಯುವ ಕಲ್ಲನ್ನು ಹೇರಿಕೊಂಡು ಬೇಕಾಬಿಟ್ಟಿ ಸಂಚರಿಸುವ ಭಾರೀ ಗಾತ್ರದ ಲಾರಿಗಳು ರಸ್ತೆಯಲ್ಲಿ ಯಮದೂತನಂತೆ ವರ್ತಿಸುತ್ತವೆ. ಕಿನ್ನಿಗೋಳಿಯಿಂದ ಕಟೀಲು ಕಡೆ ಸಾಗುವ ರಸ್ತೆಯಲ್ಲಿ ಅನೇಕ ತಿರುವುಗಳಿದ್ದು, ಇಲ್ಲಿ ಲಾರಿಗಳ ಓಡಾಟದಿಂದಾಗಿ ದ್ವಿಚಕ್ರ ಸವಾರರು, ಪಾದಚಾರಿಗಳು ಪ್ರಾಣಭಯದಿಂದಲೇ ಸಂಚರಿಸುವಂತಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಮುಲಾಜಿಗೆ ಈಡಾಗದೆ ಲಾರಿಗಳ ವೇಗಕ್ಕೆ ಕಡಿವಾಣ ಹಾಕಬೇಕು. ಅತಿವೇಗದಿಂದ ಸಂಚರಿಸುವ ಲಾರಿಗಳ ಚಾಲಕರ ಮೇಲೆ ಕಾನೂನು ಕ್ರಮ ಕೈಗೊಂಡಲ್ಲಿ ಇವುಗಳಿಂದ ಪದೇ ಪದೇ ಸಂಭವಿಸುವ ಅಪಘಾತಗಳ ಸಂಖ್ಯೆ ಕಡಿಮೆಯಾದೀತು. ಮೂಲ್ಕಿ ಪೊಲೀಸರು ಇನ್ನಾದರೂ ಇತ್ತ ಗಮನಿಸಬೇಕಾಗಿ ವಿನಂತಿ ಮಾಡುತ್ತಿದ್ದೇನೆ. ಪ್ರಮೋದ್, ಮೂರುಕಾವೇರಿ

Posted in: Special Report