ಹೆದ್ದಾರಿ ಬದಿ ತ್ಯಾಜ್ಯ ಎಸೆಯದಿರಿ

Posted on May 10, 2011

0


ರಾಷ್ಟ್ರೀಯ ಹೆದ್ದಾರಿಯ ಮೂಲ್ಕಿಯಿಂದ ಉಡುಪಿ ಕಡೆ ಸಾಗುವ ರಸ್ತೆಯ ಬದಿಯಲ್ಲ್ಲಿ ತ್ಯಾಜ್ಯವನ್ನು ಎಸೆದಿರುವುದು ಕಾಣುತ್ತದೆ. ರಾತ್ರಿಯ ವೇಳೆ ಟೆಂಪೋ ಮತ್ತಿತರ ವಾಹನ ಗಳಲ್ಲಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತದೆ. ಕೋಳಿ ಅಂಗಡಿ, ಮಾಂಸದ ಅಂಗಡಿಯ ಉಳಿದ ತ್ಯಾಜ್ಯವನ್ನು ಹೆದ್ದಾರಿಯ ಬದಿಯಲ್ಲಿ ಯಾರ ಭಯವೂ ಇಲ್ಲದೆ ಎಸೆದು ಹೋಗುತ್ತಾರೆ.

ಇವರು ಯಾರೆಂದು ತಿಳಿಯದೆ ಇವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಎರ್ಮಾಳ್, ಪಡುಬಿದ್ರಿ ಪರಿಸರದಲ್ಲಿ ಈಗ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈಗ ಕಸ ಎಸೆಯುವವರು ಸುಮ್ಮನಿದ್ದರೂ ಮುಂದಿನ ದಿನಗಳಲ್ಲಿ ಮತ್ತೆ ಇದೇ ರೀತಿ ಮಾಡಬಹುದು. ಹೆದ್ದಾರಿ ಜನರಿಗೆ ಸಂಚಾ ರಕ್ಕೆ ಅವಶ್ಯವಾಗಿದ್ದು, ರಸ್ತೆಬದಿ ತ್ಯಾಜ್ಯ ಎಸೆಯುವು ದರಿಂದ ರಸ್ತೆಯಲ್ಲಿ ಸಂಚರಿಸುವಾಗ ಅಸಹ್ಯ ವಾಸನೆ ಯಿಂದ ಮೂಗು ಮುಚ್ಚಿಕೊಳ್ಳುವಂತಾಗಿದೆ.

ಇದನ್ನು ತಪ್ಪಿಸಲು ಹೆದ್ದಾರಿ ಬದಿ ಗ್ರಾಮ ಪಂಚಾ ಯತ್ ವತಿಯಿಂದ ಬೋರ್ಡ್ ಹಾಕಲಾಗಿದ್ದರೂ ಅದರಲ್ಲಿನ ಎಚ್ಚರಿಕೆಯನ್ನು ಮಾತ್ರ ಯಾರೂ ಗಮ ನಿಸು ತ್ತಿಲ್ಲ. ರಾತ್ರಿಯ ವೇಳೆ ತ್ಯಾಜ್ಯ ಎಸೆದುಹೋಗು ವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಆಡಳಿತ ವರ್ಗ ಇನ್ನಾದರೂ ಚಿಂತಿಸಬೇಕು.

ರವಿಶಂಕರ್ ಎಸ್, ಉಡುಪಿ

Advertisements
Posted in: Special Report