ಹೆಜ್ಜೇನು ದಾಳಿ: ಆರು ಗಾಯ

Posted on May 10, 2011

0


ವಿಟ್ಲ: ಇಲ್ಲಿನ ಕೇಪು ಗ್ರಾಮ ಎಂಬಲ್ಲಿ ಗೃಹಪ್ರವೇಶದ ಮನೆಯೊಂದಕ್ಕೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ನಿನ್ನೆ ಬೆಳಿಗ್ಗೆ ಕುಕ್ಕೆಬೆಟ್ಟುವಿನ ನಾರಾಯಣ ಅಜಿಲ ಎಂಬವರ ಮನೆಯ ಗೃಹಪ್ರವೇಶಕ್ಕಾಗಿ ಅಡುಗೆಯನ್ನು ಮನೆಯ ಹೊರಗೆ ತಯಾರಿಸಲಾಗುತ್ತಿತ್ತು. ಈ ಸಂದರ್ಭ ಹಾಕಲಾಗಿದ್ದ ಬೆಂಕಿಯ ಹೊಗೆ ಪಕ್ಕದ ಮರದಲ್ಲಿದ್ದ ಹೆಜ್ಜೇನಿನ ಗೂಡಿಗೆ ತಾಕಿದೆ. ಪರಿಣಾಮ ಅಲ್ಲಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಹೆಜ್ಜೇನಿನ ದಾಳಿಗೆ ತುತ್ತಾದ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ಮೂವರನ್ನು ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ನಾರಾಯಣ, ಪ್ರಭಾಕರ್, ಗೋಪಿಕಾ ಎಂಬವರು ಚಿಕಿತ್ಸೆ ಪಡೆಯುತ್ತಿದ್ದು, ಅಲ್ಪಸ್ವಲ್ಪ ಗಾಯಗೊಂಡವರನ್ನು ರೇವತಿ(೧೮), ಲಿಂಗಪ್ಪ(೩೯), ಮಮತ(೧೪) ಎಂದು ಗುರುತಿಸಲಾಗಿದೆ.

Advertisements
Posted in: Special Report