ಮೂರನೇ ವಿವಾಹಕ್ಕೆ ಯತ್ನ: ಯುವಕ ಸೆರೆ

Posted on May 10, 2011

0


ಮಂಗಳೂರು: ಆರು ತಿಂಗಳಲ್ಲಿ ಮೂರನೇ ವಿವಾಹಕ್ಕೆ ಸಿದ್ದತೆ ನಡೆಸುತ್ತಿದ್ದ ಯುವಕನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಾಸರಗೋಡು ಜೋಯಿನ್‌ಮೂಲ ಹೌಸಿನ್ ಅಬ್ದುಲ್ ಸತ್ತಾರ್ (೨೯) ಬಂಧಿತ ಆರೋಪಿ. ಈತ ನಾಲ್ಕು ತಿಂಗಳ ಹಿಂದೆ ಲಕ್ಷ ರೂ. ಹಾಗೂ ಹತ್ತು ಪವನ್ ಚಿನ್ನ ವರದಕ್ಷಿಣೆ ಪಡೆದು ಚಾನೋಕುಂಡಿನ ಯುವತಿ ಯೊಬ್ಬಳನ್ನು ವಿವಾಹವಾಗಿದ್ದ. ಉಳ್ಳಾಲದ ಮೊಹಮ್ಮದ್ ಅನ್ವರ್, ಕಾಸರಗೋಡಿನ ರಫಿಕ್ ಎಂಬವರು ಈತನಿಗೆ ಸಹಕರಿಸಿದ್ದರು. ಎರಡು ತಿಂಗಳ ಹಿಂದೆ ಸಕಲೇಶಪುರದ ಯುವತಿಯೊಬ್ಬಳನ್ನು ವಿವಾಹವಾಗಿ ಮತ್ತೆ ಪುನಃ ಕಾಸರಗೋಡಿನ ಯುವತಿಯೊಂದಿಗೆ ವಿವಾಹಕ್ಕೆ ಮುಂದಾಗಿದ್ದ ವೇಳೆ ವಿಷಯ ತಿಳಿದ ಮೊದಲ ಪತ್ನಿ ಊರವರ ಸಹಾಯ ದಿಂದ ಪೊಲೀಸರಿಗೆ ಒಪ್ಪಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಷ ಸೇವಿಸಿದ್ದ ವ್ಯಕ್ತಿ ಸಾವು

ಮಂಗಳೂರು: ಒಂದು ವಾರದ ಹಿಂದೆ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೋರ್ವರು ನಿನ್ನೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತೆಂಕವುಳೆಪ್ಪಾಡಿಯ ಸುರೇಂದ್ರ ಪೂಜಾರಿ (೪೦) ಎಂಬವರು ಮೇ. ಮೂರರಂದು ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದ ತೀವ್ರ ಅಸ್ವಸ್ಥಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ನಿನ್ನೆ ಪೂರ್ವಾಹ್ನ ಗಂಟೆಗೆ ಸುರೇಂದ್ರ ಮೃತಪ್ಟಟ್ಟಿದ್ದಾರೆ.

Advertisements
Posted in: Special Report