ಮುಕ್ಕ: ಬಾರ್ಜ್ ಮುಳುಗq

Posted on May 10, 2011

0


ಮಂಗಳೂರು: ಸುರತ್ಕಲ್ ಸಮೀಪದ ಮುಕ್ಕ ಸಮುದ್ರದಲ್ಲಿ ಎಸ್‌ಇಝಡ್ ಪೈಪ್‌ಲೈನ್ ಕಾಮಗಾರಿಗಾಗಿ ಲಂಗರು ಹಾಕಿದ್ದ ಬಾರ್ಜ್ ನಿನ್ನೆ ಮುಳುಗಿದೆ.

ಶುಕ್ರವಾರ ಸಂಜೆ ಬಂದರ್‌ನಿಂದ ಬಂದ ಬಾರ್ಜ್ ಮುಕ್ಕದಲ್ಲಿ ಲಂಗರು ಹಾಕಿತ್ತು. ಶನಿವಾರ ಕಾಮಗಾರಿ ನಡೆಸುತ್ತಿದ್ದಾಗ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಹಿಟಾಚಿ ಯಂತ್ರದ ಕೆಳಭಾಗ ಸಮುದ್ರದ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ನಿನ್ನೆ ಬಾರ್ಜ್ ಕೂಡಾ ಮುಳುಗಡೆ ಕಂಡಿದೆ. ಇದರಲ್ಲಿರುವ ಡೀಸೆಲ್ ಮತ್ತಿತರ ತೈಲ ಸೋರಿಕೆಯಾದರೆ ಸಮುದ್ರದ ನೀರು ಮಲಿನಗೊಳ್ಳುವ ಸಾಧ್ಯತೆಯಿರುವುದರಿಂದ ಮೀನುಗಾರರು ಆತಂಕಿತರಾಗಿದ್ದಾರೆ.

ಎಸ್‌ಇಝಡ್ ತನ್ನ ತ್ಯಾಜ್ಯವನ್ನು ಸಮುದ್ರಕ್ಕೆ ಬಿಡಲು ಮುಕ್ಕ ಬಳಿಯ ಕಡಲ ತೀರವನ್ನು ಆಯ್ದುಕೊಂಡಿದ್ದು, ಇಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಸಲು ಹಿಟಾಚಿ ಯಂತ್ರ, ಬಾರ್ಜ್ ಹಾಗೂ ಭಾರೀ ಗಾತ್ರದ ಪೈಪ್‌ಗಳನ್ನು ತಂದು ಹಾಕಲಾಗಿದೆ. ಮೊಗವೀರ ಸಮುದಾಯದ ಮುಖಂಡರೂ ಸೇರಿದಂತೆ ಸ್ಥಳೀಯರು ಇಲ್ಲಿ ಪೈಪ್‌ಲೈನ್ ಅಳವಡಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಬೆನ್ನಿಗೇ ಬಾರ್ಜ್ ಮುಳುಗಡೆಯಾಗಿದೆ.

Advertisements
Posted in: Special Report