ಬಾಬಾ ರಾಮ್ದೇವ್ಗೆ ಏಕೆ ಇಷ್ಟು ಭದ್ರತೆ?

Posted on May 10, 2011

0


ಯೋಗಗುರು ಬಾಬಾ ರಾಮ್‌ದೇವ್ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಕೆಲವೇ ಘಂಟೆಗಳ ಯೋಗ ಕಾರ್ಯ ಕ್ರಮ ನಡೆಸಿಕೊಟ್ಟರು. ವಿವಿಧ ರಾಜ ಕೀಯ ಪಕ್ಷದ ನಾಯಕರು ತಮ್ಮ ತೂಕ ಮೀರಿದ ದೇಹ ಹೊತ್ತು ಕಾರ್ಯಕ್ರಮದಲ್ಲಿ ಅದೇನು ಯೋಗ ಕಲಿತರೋ ದೇವರಿಗೇ ಗೊತ್ತು.

ಒಟ್ಟಾರೆ ಬಾಬಾ ರಾಮ್‌ದೇವ್ ಅವರ ಯೋಗ ಎಂದು ನಗರದ ಪ್ರತಿಷ್ಠಿತ ಕುಟುಂಬ ಗಳ ಮಂದಿ ಚಾಪೆ ಹಾಸಿ ಅಷ್ಟಿಷ್ಟು ಯೋಗ ಮಾಡಿದರು. ಇಲ್ಲಿ ಯೋಗ ಎನ್ನುವುದ ಕ್ಕಿಂತಲೂ ಕೆಲವರಿಗೆ ಪ್ರತಿಷ್ಠೆ ಮೆರೆಯುವುದೇ ಮುಖ್ಯವಾಗಿತ್ತು ಆದರೆ ಇಂತಹ ಕಾರ್ಯಕ್ರಮಕ್ಕೆ ತಗಲಿದ ಖರ್ಚು ಹಲವು ಲಕ್ಷಕ್ಕೂ ಅಧಿಕ. ಒಬ್ಬ ಯೋಗ ಗುರುವಿನ ರಕ್ಷಣೆಗೆ ಭಾರೀ ಬಂದೋಬಸ್ತ್. ಇದಕ್ಕಾಗಿ ಇನ್ನಷ್ಟು ಖರ್ಚು. ಇದನ್ನು ನೋಡಿದರೆ ಬಾಬಾ ಒಬ್ಬ ಯೋಗ ಗುರುವೇ? ಪಾರ್ಲಿಮೆಂಟ್ ಸದಸ್ಯನೇ ಎಂದು ತಿಳಿಯುತ್ತಿಲ್ಲ. ಬಾಬಾ ವಿದೇಶಿ ಕಂಪೆನಿಗಳ ವಿರುದ್ಧ ಹೋರಾಟ ಮಾಡುವುದಾಗಿ ಹೇಳುತ್ತಾರೆ. ಹೋದಲ್ಲಿ-ಬಂದಲ್ಲಿ ದೇಸಿ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ.

ಆದರೆ ಮಂಗಳೂರಿನ ಇವರ ಯೋಗ ಕಾರ್ಯ ಕ್ರಮವನ್ನು ಇದೇ ವಿದೇಶಿ ಕಂಪೆನಿಗಳ ಸಮೂಹ ಎಸ್‌ಇಝಡ್ ಭಾರೀ ಉತ್ಸಾಹದಿಂದ ಆಯೋಜಿಸಿತ್ತು ಎನ್ನುವುದು ವಿಶೇಷವಲ್ಲವೇ? ಈ ಬಗ್ಗೆ ಬಾಬಾ ರಾಮ್ ದೇವ್ ಏನು ಹೇಳುತ್ತಾರೆ? ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟಿದ್ದ ಹಣ ವಾಪಸ್ ದೇಶಕ್ಕೆ ತರುವಂತೆ ಆಗ್ರಹಿಸಿ ಬಾಬಾ ರಾಮ್‌ದೇವ್ ಉಪವಾಸ ಸತ್ಯಾಗ್ರಹ ಕುಳಿತು ಕೊಳ್ಳು ವುದು ಸರಿ.

ಆದರೆ ಅವರು ಈ ಮಾತನ್ನು ಬರೇ ಬಾಯಿ ಮಾತಿನಲ್ಲೇ ಹೇಳಿದರೆ ಪ್ರಯೋಜನವಿಲ್ಲ. ಅದರ ಬದಲು ಉಪವಾಸ ಕುಳಿತುಕೊಳ್ಳಲಿ ಪ್ರಸಾದ್, ಮಂಗಳೂರು

Advertisements
Posted in: Special Report