ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದ ತೀರ್ಪಿಗೆ ಸ ು.ಕೋರ್ಟ್ ತಡೆ

Posted on May 10, 2011

0


ದೆಹಲಿ: ಬಾಬರಿ ಮಸೀದಿ-ರಾಮ ಜನ್ಮ ಭೂಮಿ ಭೂ ವಿವಾದಕ್ಕೆ ಸಂಬಂಧಿಸಿ, ವಿವಾ ದಿತ ಭೂಮಿಯನ್ನು ಮೂರು ಪಕ್ಷಗಾರರಿಗೆ ಸಮಾನವಾಗಿ ವಿಭಜಿಸಲು ನಿರ್ದೇಶಿಸಿರುವ ಅಲಹಾಬಾದ್ ಹೈಕೋರ್ಟ್‌ನ ತೀರ್ಪಿಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ಇದೊಂದು ಅಪರೂಪದ ಮತ್ತು ಆಶ್ಚರ್ಯ ಕರ ತೀರ್ಪು ಎಂದು ಅಭಿಪ್ರಾಯ ಪಟ್ಟಿದೆ. ವಿವಾದಿತ ತಾಣವನ್ನು ವಿಭಜಿಸಲು ನಿರ್ದೇ ಶಿಸುವ ಮೂಲಕ ಅಲಹಾಬಾದ್ ಹೈಕೋರ್ಟ್ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ ಎಂದು ಸೋಮವಾರ ಈ ಸಂಬಂಧ ತೀರ್ಪೊಂದನ್ನು ಘೋಷಿ ಸಿರುವ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಗಳಾದ ಅಫ್ತಾಬ್ ಆಲಂ ಮತ್ತು ಆರ್‌ಎಂ ಲೋಧರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಇದೊಂದು ಅಪರೂಪದ ತೀರ್ಪಾ ಗಿದ್ದು, ಇದರ ಕಾರ್ಯಾಚರಣೆಯನ್ನು ತಡೆಯಬೇಕಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಇದೊಂದು ಯಾವುದೇ ಪಕ್ಷಗಾರರು ವಿನಂತಿಸಿರದ ಅಪರೂಪದ ಮತ್ತು ಆಶ್ಚರ್ಯ ಕರ ಆದೇಶವಾಗಿದೆ ಮತ್ತು ಅದನ್ನು ಉಳಿ ಯಲು ಬಿಡುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಎಲ್ಲ ಪಕ್ಷಗಾರರ ಮನವಿಗಳನ್ನು ಸ್ವೀಕರಿಸಿದ ನ್ಯಾಯಾಲಯ, ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ೧೯೯೩ ಮತ್ತು ೨೦೦೨ರಲ್ಲಿ ನೀಡಿರುವ ಆದೇಶದನ್ವಯ ವಿವಾದಿತ ತಾಣದಲ್ಲಿ ಯಥಾಸ್ಥಿತಿ ಕಾಯ್ದು ಕೊಳ್ಳುವಂತೆ ತಿಳಿಸಿದೆ. ವಿವಾದಿತ ತಾಣದ ಕುರಿತ ಅಲಹಾಬಾದ್ ಮೂರನೇ ಪುಟಕ್ಕೆ

Advertisements
Posted in: National News